ದೆಹಲಿ: ಭಾರತದ ಹೊಸ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅವರು (Vice Prsident Of India Jagdeep Dhankhar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) ಅಭ್ಯರ್ಥಿ ಜಗದೀಪ್ ಧನಕರ್ ಅವರು ಗುರುವಾರ ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ನಾಯಕರು ನೂತನ ಉಪರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಮಾಣ ವಚನಕ್ಕೆ ಮುನ್ನ ಜಗದೀಪ್ ಧನಕರ್ ಅವರು ದೆಹಲಿಯ ರಾಜ್ ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದ
ಆಶೀರ್ವಾದ, ಸ್ಫೂರ್ತಿ ಮತ್ತು ಪ್ರೇರಣೆ ದೊರೆಯಿತು
“ಮಹಾತ್ಮಾ ಗಾಂಧೀಜಿ ಅವರಿಗೆ ಗೌರವ ಸಲ್ಲಿಸುವಾಗ ರಾಜ್ ಘಾಟ್‌ನ ಪ್ರಶಾಂತ ಭವ್ಯತೆಯಲ್ಲಿ ಭಾರತ ಸೇವೆಯಲ್ಲಿ ಸದಾ ಇರುವಂತೆ ಆಶೀರ್ವಾದ, ಸ್ಫೂರ್ತಿ ಮತ್ತು ಪ್ರೇರಣೆಯನ್ನು ಅನುಭವಿಸಿದೆ" ಎಂದು ಹೊಸ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ
ಅತ್ಯಧಿಕ ಮತ ಗಳಿಸಿದ್ದ ಜಗದೀಪ್ ಧ
ಆಗಸ್ಟ್ 6 ರಂದು ಜಗದೀಪ್ ಧನಕರ್ ಅವರು ಶೇಕಡಾ 74.36 ರಷ್ಟು ಮತಗಳನ್ನು ಗಳಿಸಿ ಭಾರತದ ಹೊಸ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. 1997 ರಿಂದ ನಡೆದ ಕೊನೆಯ ಆರು ಉಪ ರಾಷ್ಟ್ರಪತಿಗಳ ಚುನಾವಣೆಯಲ್ಲೇ ಅತ್ಯಧಿಕ ಮತಗಳನ್ನು ಅಂದರೆ ಜಗದೀಪ್ ಧನಕರ್ ಅವರು ಒಟ್ಟು ಮತಗಳ ಶೇಕಡಾ 74.36 ರಷ್ಟು ಮತಗಳನ್ನು ಗಳಿಸಿದ್ದರು. ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ಮಾರ್ಗರೇಟ್ ಆಳ್ವಾ ಅವರನ್ನು ಜಗದೀಪ್ ಧನಕರ್ ಸೋಲಿಸಿದ್ದರು. ನಕರ್.ರು.ರು.

Post a Comment