Veer Savarkar: ರೋಖಡೆ ಕುಟುಂಬಸ್ಥರಿಂದ ಪ್ರತಿನಿತ್ಯ ಸಾವರ್ಕರ್ ಫೋಟೋಗೆ ಪೂಜೆ ನಾವು ಮನೆ ಕಟ್ಟಿಸಿದ ಮೇಲೆ ಅಪ್ರತಿಮ ದೇಶಪ್ರೇಮಿ ಮತ್ತು ಹೋರಾಟಗಾರ ವೀರ ಸಾವರ್ಕರ್ ಹೆಸರನ್ನು ಇರಿಸಿದ್ದೇವೆ. ವೀರ ಸಾವರ್ಕರ್ ಬಗ್ಗೆ ಓದಿದ ಮಾಹಿತಿ ಇತ್ತು. ಹಾಗಾಗಿ ಅವರ ಹೆಸರನ್ನೇ ಮನೆಗೆ ಇರಿಸಲಾಗಿದೆ ಎಂದು ಹೇಳುತ್ತಾರೆ.

ವೀರ ಸಾವರ್ಕರ್
  ರಾಜ್ಯದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್​ಗೆ (Veer Savrkar Flex) ಸಂಬಂಧಿಸಿದ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಗಣೇಶೋತ್ಸವದಲ್ಲಿ (Ganeshotsava) ಸಾವರ್ಕರ್ ಫೋಟೋ ಮತ್ತು ವಿಡಿಯೋ (Savarkar Photo And Video) ಬಿತ್ತರಿಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಆದ್ರೆ ಗದಗ (Gadag) ಜಿಲ್ಲೆಯ ರೋಖಡೆ ಕುಟುಂಬಕ್ಕೆ (Rokhade Family) ವೀರ ಸಾವರ್ಕರ್ ಆರಾಧ್ಯ ದೈವ. ಇವರ ದೇವರ ಮನೆಯಲ್ಲಿ ವೀರ ಸಾವರ್ಕರ್ ಫೋಟೋ ಇರಿಸಿ ಪೂಜೆ ಮಾಡಲಾಗುತ್ತದೆ. ಮಹೇಶ್ ಮತ್ತು ವಿಶ್ವನಾಥ್​ ಅವರ ಮನೆಗೂ ಸಹ ವೀರ ಸಾವರ್ಕರ್ ನಿಲಯ ಎಂದು ಹೆಸರಿಡಲಾಗಿದೆ. ಸುಮಾರು 10 ವರ್ಷಗಳಿಂದಲೂ ಸಾವರ್ಕರ್ ಫೋಟೋಗೆ ರೋಖಡೆ ಕುಟುಂಬ ಪೂಜೆ (Savarkar Photo Puja) ಸಲ್ಲಿಸಿಕೊಂಡು ಬಂದಿದೆ. ಯಾರು ಏನಾದ್ರೂ ಹೇಳಲಿ. ನಮ್ಮ ಮನೆಯಲ್ಲಿ ಸಾವರ್ಕರ್ ಪೂಜೆ ಮಾತ್ರ ನಿಲ್ಲಲ್ಲ ಎಂದು ರೋಖಡೆ ಕುಟುಂಸ್ಥರು ಹೇಳುತ್ತಾರೆ. ರೋಖಡೆ ಅವರ ನಿವಾಸ ಗದಗ ನಗರದ ಒಕ್ಕಲಗೇರಿಯಲ್ಲಿದೆ.

ಸದ್ಯ ಬೆಳವಣಿಗೆಗಳ ಕುರಿತು ಮಾತನಾಡಿರುವ ವಿಶ್ವನಾಥ್ ರೋಖಡೆ, ನಾವು ಮನೆ ಕಟ್ಟಿಸಿದ ಮೇಲೆ ಅಪ್ರತಿಮ ದೇಶಪ್ರೇಮಿ ಮತ್ತು ಹೋರಾಟಗಾರ ವೀರ ಸಾವರ್ಕರ್ ಹೆಸರನ್ನು ಇರಿಸಿದ್ದೇವೆ. ವೀರ ಸಾವರ್ಕರ್ ಬಗ್ಗೆ ಓದಿದ ಮಾಹಿತಿ ಇತ್ತು. ಹಾಗಾಗಿ ಅವರ ಹೆಸರನ್ನೇ ಮನೆಗೆ ಇರಿಸಲಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Savarkar: ಮನೆ ಮುಂದೆ ಬ್ಯಾನರ್ ಹಾಕಿದ ಶಾಸಕ ರೇಣುಕಾಚಾರ್ಯ; ಮದ್ವೆಯಲ್ಲಿ ಸಾವರ್ಕರ್ ಫೋಟೋ ಗಿಫ್ಟ್

ಇದು ನಮ್ಮ ಭಕ್ತಿ

ನಾವು ದೇವರಲ್ಲಿ ಎಷ್ಟು ಭಕ್ತಿ ಇರಿಸಿದ್ದೇವೋ? ಸಾವರ್ಕರ್ ಅವರು ದೇಶದ ಮೇಲೆ ಭಕ್ತಿ ಇರಿಸಿದ್ದರು. ಹಾಗಾಗಿ ದೇವರ ಮನೆಯಲ್ಲಿ ಅವರ ಫೋಟೋ ಇರಿಸಿ ನಮ್ಮ ಭಕ್ತಿಯನ್ನು ತೋರಿಸುತ್ತಿದ್ದೇವೆ


ಎಂದರು.ನಾನು ಸಾವರ್ಕರ್ ಎಂದು ಘೋಷಣೆ ಹೇಳೋಣ

ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀರಾಮ ಸೇನೆಯ ಸದಸ್ಯ ರಾಜು ಖಾನಪ್ಪನವರ್, ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡೋದು ತಪ್ಪು. ಅವರು ಇಡೀ ಜೀವನವನ್ನ ಜೈಲಿನಲ್ಲಿ ಕಳೆದಿದ್ದಾರೆ. ಕೆಲವು ರಾಜಕೀಯ ನಾಯಕರು ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿರೋದು ನಮಗೆ ನೋವುಂಟು ಮಾಡಿದೆ. ನಾನು ಸಾವರ್ಕರ್ ಎಂದು ಘೋಷಣೆ ಕೂಗುವ ಮೂಲಕ ಇವರನ್ನ ಎಚ್ಚರಗೊಳಿಸಬೇಕಿದೆ ಎಂದರು.

ಯಾರು ಸಾವರ್ಕರ್?

1883, ಮೇ 28ರಂದು ಮಹಾರಾಷ್ಟ್ರದ ನಾಶಿಕ್​ನಲ್ಲಿ ಜನಿಸಿದ ಸಾವರ್ಕರ್ ಸಾಕಷ್ಟು ವಿವಾದಗಳಿರುವ ವ್ಯಕ್ತಿತ್ವ. ಇತ್ತೀಚೆಗೆ ಸಾಕಷ್ಟು ವಿವಾದಗಳು ಇವರ ಹೆಸರಿಗೆ ಮೆತ್ತಿಕೊಳ್ಳುತ್ತಿವೆ. ಜೀವಕ್ಕೆ ಹೆದರಿ ಬ್ರಿಟಿಷರ ಪರ ನಿಂತಿದ್ದ ಹೆದರುಪುಕ್ಕಲ ಎಂಬೆಲ್ಲ ಟೀಕೆಗಳು ಇವರ ವಿರುದ್ಧ ಮಾಡಲಾಗುತ್ತಿದೆ. ಕಠೋರ ಹಿಂದುತ್ವ ಎಂಬ ಟೀಕೆಗಳು ಕೇಳಿಬರುತ್ತವೆ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಜೊತೆಗೆ, ಹಿಂದುತ್ವದ ಉಗ್ರ ಪ್ರತಿಪಾದಕರೂ ಹೌದು.

1921ರಲ್ಲಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿ 50 ವರ್ಷ ಜೈಲುಶಿಕ್ಷೆ ವಿಧಿಸಿತು. ಅಂಡಮಾನ್​ ಜೈಲಿನಲ್ಲಿರಿಸಿತು. ಅತ್ಯಂತ ಉಗ್ರ ಶಿಕ್ಷೆ ಇವರಿಗೆ ಕಾದಿತ್ತು. 10 ವರ್ಷ ಯಮಯಾತನೆಯ ಶಿಕ್ಷೆ ಅನುಭವಿಸಿದ ಇವರನ್ನು 1921ರಲ್ಲಿ ಕೆಲ ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: Vijayapura: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿ


ದ ಬಿಜೆಪಿ ಮುಖಂಡವಿನಾಯಕ್‌ ದಾಮೋದರ್‌ ಸಾವರ್ಕರ್‌

ದ್ವಿರಾಷ್ಟ್ರ ಕಲ್ಪನೆಗೆ ಬೆಂ

ಆ ಬಳಿಕ ಇವರು ಬ್ರಿಟಿಷರು ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಹಿಂದುತ್ವದ ಬಗ್ಗೆ ಗಮನ ಹರಿಸಿದರು. ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂದುತ್ವದ ಉಗ್ರ ಪ್ರತಿಪಾದಕರಷ್ಟೇ ಅಲ್ಲ, ಆ ಶಬ್ದವನ್ನು ಜನಪ್ರಿಯಗೊಳಿಸಿದ್ದೇ ಅವರು. ಅವರು ದ್ವಿರಾಷ್ಟ್ರ ಕಲ್ಪನೆಗೆ ಬೆಂಬಲ ನೀಡಿದ್ದರು. ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರ, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕೆಂಬುದು ಇವರ ಅಭಿಪ್ರಾಯ. ಇವರು ಬರೆದ “ಹಿಂದುತ್ವ” ಪುಸ್ತಕದಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ.ಬಲ

Post a Comment

Previous Post Next Post