Public Vahini News: ವರಮಹಾಲಕ್ಷ್ಮೀ ಹಬ್ಬದಂದು ದೇವಿಯ ಅಲಂಕಾರಕ್ಕೆ ಹೆಚ್ಚಿನ ಮಹತ್ವ. ಹೆಂಗಳೆಯರು ಮುಂಜಾನೆಯೇ ಎದ್ದು ದೇವಿಯ ಅಲಂಕಾರದಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ದೇವಿಯ ಮೂರ್ತಿಯೇ ಮುಟ್ಟಂಗಿಲ್ಲ ಸ್ವಾಮಿ ಅನ್ನೋ ತರಾ ಆಗೋಗಿದೆ.
ಬೆಂಗಳೂರು (ಆಗಸ್ಟ್ 03): ವರಮಹಾಲಕ್ಷ್ಮೀ ಹಬ್ಬ (Varamahalakshmi) ಅಂದ್ರೆ ಹೆಣ್ಮಕ್ಕಳಿಗೆ ಮೆಚ್ಚಿನ ಹಬ್ಬ. ಶ್ರಾವಣ ಮಾಸದಲ್ಲಿ (Sharavana month ) ಬರೋ ಮಹತ್ವದ ಹಬ್ಬವೇ ವರಮಹಾಲಕ್ಷ್ಮೀ ಹಬ್ಬ. ಚೆಂದದಲ್ಲಿ ರೆಡಿಯಾಗಿ, ವಿಶೇಷವಾಗಿ ಆಲಂಕರಿಕೊಂಡು ಹಬ್ಬ (Festival )ಆಚರಿಸುತ್ತಾ ಓಡಾಡುತ್ತಿರೋದನ್ನು ನೋಡೋದೇ ಚಂದ. ಇದಕ್ಕಾಗಿ ವಾರಕ್ಕೂ ಮೊದಲೇ ಎಲ್ಲಾ ಮನೆ-ಮನಗಳಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಅದರಲ್ಲೂ ಈ ಬಾರಿ ಕೊರೋನಾ (Corona) ನಮ್ಮಿಂದ ಬಹುತೇಕ ದೂರ ಹೋದ ಹಿನ್ನೆಲೆ ಇನ್ನಷ್ಟು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಮಹಿಳೆಯರು ಪ್ಲ್ಯಾನ್ ಮಾಡಿಕೊಂಡಿದ್ರು. ಆದರೆ ಈ ಬಾರಿಯೂ ಹೆಂಗಳೆಯರಿಗೆ (Ladies) ವರಮಹಾಲಕ್ಷ್ಮೀ ಹಬ್ಬ ಕೈಸುಡೋ ಥರಾ ಆಗೋಗಿದೆ. ದೇವಿಯ ಮೂರ್ತಿಯೇ (Goddess Idol) ದುಬಾರಿಯಾಗಿದೆ.
ವರಮಹಾಲಕ್ಷ್ಮೀ ಹಬ್ಬದಂದು ದೇವಿಯ ಅಲಂಕಾರಕ್ಕೆ ಹೆಚ್ಚಿನ ಮಹತ್ವ. ಅದಕ್ಕಾಗಿ ಹೆಂಗಳೆಯರು ಮುಂಜಾನೆಯೇ ಎದ್ದು ದೇವಿಯ ಅಲಂಕಾರದಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ದೇವಿಯ ಮೂರ್ತಿಯೇ ಮುಟ್ಟಂಗಿಲ್ಲ ಸ್ವಾಮಿ ಅನ್ನೋ ಥರಾ ಆಗೋಗಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಎಲ್ಲಾ ದುಬಾರಿ
ಶ್ರಾವಣ ಮಾಸದ ಎರಡನೇ ಶುಕ್ರವಾರವೇ ವರಮಹಾಲಕ್ಷ್ಮೀ ಹಬ್ಬ. ಈ ಹಬ್ಬದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಖರೀದಿ ಭರಾಟೆ ಜೋರಾಗಿದೆ. ಆದರೆ ಹಬ್ಬದ ಎಲ್ಲಾ ವಸ್ತುಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ಮೂರ್ತಿಯ ಬೆಲೆಯೇ ಹೆಚ್ಚಾಗಿದೆ.
[ವರಮಹಾಲಕ್ಷ್ಮೀ ಹಬ್ಬ
ವರವ ಕೊಡೋ ಲಕ್ಷ್ಮೀ ಮೂರ್ತಿಯೇ ದುಬಾರಿ
ವರಮಹಾಲಕ್ಷ್ಮೀ ಹಬ್ಬಕ್ಕೆ ಕಳೆ ಕೊಡೋದೇ ವಿಶೇಷವಾಗಿ ಅಲಂಕರಿಸಿರುವ ಮೂರ್ತಿ. ಜನ ಅವರವರ ಅನುಕೂಲಕ್ಕೆ ತಕ್ಕಂತೆ ದೇವಿಯನ್ನು ಶೃಂಗರಿಸ್ತಾರೆ. ಆದರೆ ಈ ಬಾರಿ ವರಮಹಾಲಕ್ಷ್ಮೀ ಮೂರ್ತಿಯ ಬೆಲೆಯೇ ಕೈಗೆಟುಕದ ರೀತಿ ಆಗೋಗಿದೆ. ಚಿಕ್ಕ ಮೂರ್ತಿಯ ಬೆಲೆಯೇ 1000 ರೂಪಾಯಿಯ ಸಮೀಪದಲ್ಲಿದೆ.
ಮಹಾಲಕ್ಷ್ಮೀ ಮೂರ್ತಿಯ ಅಲಂಕಾರವರಮಹಾಲಕ್ಷ್ಮೀ ಮೂರ್ತಿಯ ಬೆಲೆ ಎಷ್ಟೆಷ್ಟಿದೆ..?
ಚಿಕ್ಕ ಮೂರ್ತಿ ಬೆಲೆ : 850-1250 ರೂ.
ಸಾಧಾರಣ ಗಾತ್ರದ ಮೂರ್ತಿಯ ಬೆಲೆ: 1200-1500 ರೂ.
ಕೊಂಚ ದೊಡ್ಡ ಮೂರ್ತಿ: 2500- 3700 ರೂ.
ಇದನ್ನೂ ಓದಿ: ನಿಮ್ಮ ರಾಶಿಯ ಪ್ರಕಾರ ಯಾರೊಂದಿಗೆ ನೀವು ಪ್ರಯಾಣಿಸಿದರೆ ಒಳ್ಳೆಯದು?
ಲಕ್ಷ್ಮೀ ಮೂರ್ತಿ ಫುಲ್ ಸೆಟ್ಗೆ 10 ಸಾವಿರ..!
ಈಗಿನ ಜಂಜಾಟದ ಜೀವನದಲ್ಲಿ ಯಾರಿಗೂ ಸಮಯ ಸಿಗೋದೇ ಇಲ್ಲ. ಎಲ್ಲರದ್ದೂ ಬ್ಯುಸಿ ಲೈಫ್. ಆದರೂ ವರಮಹಾಲಕ್ಷ್ಮೀ ಹಬ್ಬ ಮಾಡಬೇಕೆಂಬ ಆಸೆನೂ ಇರುತ್ತೆ. ಅಂಥವರಿಗೆ ಮಹಾಲಕ್ಷ್ಮೀ ದೇವಿಯ ಫುಲ್ ಸೆಟ್ ಕೂಡ ಸಿಗುತ್ತೆ. ದೇವಿಯ ಫುಲ್ ಸೆಟ್ 8 ಸಾವಿರದಿಂದ ಆರಂಭವಾಗುತ್ತೆ. ವಿವಿಧ ಅಲಂಕಾರದಲ್ಲಿ 10 ಸಾವಿರದವರೆಗೂ ಮೂರ್ತಿಗಳು ದೊರೆಯುತ್ತದೆ. ಕಳೆದ ಬಾರಿ 5 ಸಾವಿರ ಆಸುಪಾಸಲ್ಲಿದ್ದ ಈ ಬೆಲೆ ಈಗ ದಿಢೀರ್ ಅಂತಾ 10 ಸಾವಿರದವರೆಗೆ ತಲುಪಿದೆ.
ಇದನ್ನೂ ಓದಿ: ಭಾರತದಲ್ಲಿ ಖ್ಯಾತಿ ಪಡೆದ ನಾಗ ದೇವಾಲಯಗಳಿವು
ಹಬ್ಬದ ಎಫೆಕ್ಟ್.. ಹೂವು-ಹಣ್ಣು ಮುಟ್ಟಂಗಿಲ್ಲ..
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಬೆಂಗಳೂರಿಗೆ ವಿಶೇಷ ಕಳೆ ಬಂದಿರುತ್ತೆ. ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರೋರು ಸಂಭ್ರಮ ಸಡಗರದಿಂದ ಹಬ್ಬ ಆಚರಿಸ್ತಾರೆ. ಈಗಾಗಲೇ ಹಬ್ಬದ ನಿಮಿತ್ತ ಶಾಪಿಂಗ್ ಕೂಡ ಮುಗಿಸಿರ್ತಾರೆ. ಆದರೆ ಹೂವು, ಹಣ್ಣು ಎಲ್ಲವೂ ದುಬಾರಿಯಾಗಿದೆ. ಯಾವುದನ್ನು ಕೊಳ್ಳೋದು-ಬಿಡೋದು ಅಂತಾ ಜಂಜಾಟದಲ್ಲಿದ್ದಾರೆ. ಅದರಲ್ಲೂ ದೇವಿ ಮೂರ್ತಿಯ ಬೆಲೆಯೂ ಹೆಚ್ಚಾಗಿದ್ದು ಹಬ್ಬ ಆಚರಿಸಲು ನೂರು ಬಾರಿ ಯೋಚಿಸುವಂತಾಗಿದೆ. ಆದರೂ ವರವ ಕೊಡೋ ಮಹಾಲಕ್ಷ್ಮೀಯನ್ನು ಭಕ್ತಿ ಭಾವದಿಂದ ನೆನೆದು ಸಂತ್ರಪ್ತರಾಗ್ತಾರೆ ಭಕ್ತರು.



Post a Comment