Thief Arrest: ಹೆಲ್ಮೆಟ್​​ ಮೇಲಿದ್ದ ಬಿಳಿ ಗೆರೆಯಲ್ಲಿತ್ತು ಕಳ್ಳನ ರಹಸ್ಯ! 51 ಪ್ರಕರಣಕ್ಕೆ ಬೇಕಾಗಿದ್ದವ ಅರೆಸ್ಟ್


  ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೇ ಸರಗಳ್ಳತನ ಮಾಡುವವರೆಗೂ ಬೈಕ್ನಲ್ಲೇ ಸುತ್ತಾಟ ನಡೆಸಿ ಕದಿಯುತ್ತಿದ್ದ. ಊಟಕ್ಕೆ ಹೋದಾಗಲೂ ಹೆಲ್ಮೆಟ್ ತೆಗೆಯುತ್ತಿರಲಿಲ್ಲ. ಈ ಕಳ್ಳ ಖಾಕಿ ಕೈಗೆ ತಗ್ಲಾಕೊಂಡಿದ್ದೇ ರೋಚಕ.

 ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳನನ್ನು (Thief Arrest) ಪೊಲೀಸರು ಬಂಧಿಸಿದ್ದಾರೆ. 51 ಪ್ರಕರಣಕ್ಕೆ (Case) ಬೇಕಾಗಿದ್ದ ಆರೋಪಿಯನ್ನು ಪೊಲೀಸರು (Police) ಹರಸಾಹಸ ಪಟ್ಟು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಪುಟ್ಟೇನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಮಿಳುನಾಡು (Tamil Nadu ) ಮೂಲದ ಸಂತೋಷ್ ಬಂಧಿತ ಆರೋಪಿ. ಸರಗಳ್ಳತನ (Chain Snatch) ಮಾಡುತ್ತಿದ್ದ ಸಂತೋಷ್ನನ್ನು ಬಂಧಿಸಿ ಬರೋಬ್ಬರಿ 2 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೇ ಸರಗಳ್ಳತನ ಮಾಡುವವರೆಗೂ ಬೈಕ್ನಲ್ಲೇ ಸುತ್ತಾಟ ನಡೆಸಿ ಕದಿಯುತ್ತಿದ್ದ. ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಕೃತ್ಯ ಎಸಗುತ್ತಿದ್ದ. ಆದರೆ ಈ ಕಳ್ಳ ಖಾಕಿ ಕೈಗೆ ತಗ್ಲಾಕೊಂಡಿದ್ದೇ ರೋಚಕ

ಬೆಂಗಳೂರು ಸಿಟಿ ಪೊಲೀಸರ ನಿದ್ದೆಗೆಡೆಸಿದ್ದ ಖತರ್ನಾಕ್ ಸರಗಳ್ಳನನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ಸಂತೋಷ್ ಬಂಧಿತ ಆರೋಪಿ. ಸಂತೋಷ್ಗೆ ಸಹಕರಿಸಿದ್ದ ಆರೋಪಿ ರವಿಯನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಆರೋಪಿ ಸಂತೋಷ್ ಇಡೀ ಬೆಂಗಳೂರು ನಗರ ಸುತ್ತಿ ಸರಗಳ್ಳತನ ಮಾಡುತ್ತಿದ್ದ


. .ದ್ದ ಸರಗಳ್ಳನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಳಗ್ಗೆ 5 ಗಂಟೆಗೆ ಮನೆಬಿಟ್ಟು ಕಳ್ಳತನಕ್ಕಿಳಿಯುತ್ತಿದ್ದ!

ಸಂತೋಷ್​ ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೇ ಸರಗಳ್ಳತನ ಮಾಡುವವರೆಗೂ ಬೈಕ್​ನಲ್ಲಿ ಸುತ್ತಾಟ ನಡೆಸ್ತಿದ್ದ. ನಕಲಿ ನಂಬರ್ ಪ್ಲೇಟ್ ಬಳಸಿ ಕೃತ್ಯ ನಡೆಸ್ತಿದ್ದ. ಮೊದಲು ಆರ್​ಟಿಓ ವೆಬ್ ಸೈಟ್​ಗೆ ಹೋಗಿ ಬೈಕ್ ನಂಬರ್ ಸರ್ಚ್ ಮಾಡುತ್ತಿದ್ದ. ತನ್ನ ಪಲ್ಸರ್ ಬೈಕ್ ಕಲರ್​ಗೆ ಯಾವ ಯಾವ ನಂಬರ್ ಇದೆ ಎಂದು ಸರ್ಚ್ ಮಾಡುತ್ತಿದ್ದ. ಬಳಿಕ ಅದೇ ಕಲರ್ ಬೈಕ್​ನ ನಂಬರ್ ಕಲೆಕ್ಟ್ ಮಾಡುತ್ತಿದ್ದ.

ಇದನ್ನೂ ಓದಿ: ನಾನ್ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ, ಬೆಳಗಾವಿ ನಂದೈತಿ! ಚಿರತೆ ತಮಾಷೆ ಫೋಟೋ ವೈರಲ್

 ಊಟಕ್ಕೆ ಹೋದರೂ ಬೈಕ್​ ತೆಗೆಯುತ್ತಿರಲಿಲ್ಲ!

ಆರೋಪಿ ಸಂತೋಷ್​ ಕಳ್ಳತನಕ್ಕೆ ಇಳಿದಾಗ ಎಲ್ಲಿಯೂ ಹೆಲ್ಮೆಟ್ ತೆಗೆಯದೇ ಬೈಕ್​ನಲ್ಲಿ ಓಡಾಡುತ್ತಿದ್ದ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ. ಬೈಕ್​ನಲ್ಲಿ ಸುತ್ತಾಡುವಾಗ ಊಟಕ್ಕೆ ಹೋದರು ಹೆಲ್ಮೆಟ್ ತೆಗೆಯುತ್ತಿರಲಿಲ್ಲ.

ಕಳೆದ ಎರಡು ತಿಂಗಳಿಂದ ಪುಟ್ಟೇನಹಳ್ಳಿ ಪೊಲೀಸರು ಚೈನ್ ಸ್ಟಾರ್ ಸಂತೋಷ್ ಹಿಂದೆ ಬಿದಿದ್ದರು. ಸುಮಾರು 300 ಕಿಲೋ ಮೀಟರ್ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಈತ ಕಳೆದ 4 ವರ್ಷದಿಂದ ಯಾರಿಗೂ ಸಿಕ್ಕಿರಲಿಲ್ಲ. ರಾತ್ರಿ ಹಗಲು ರೋಡ್​​ನಲ್ಲಿ ಪುಟ್ಟೇನಹಳ್ಳಿ ಇನ್ಸ್ ಪೆಕ್ಟರ್ ಮುನಿರೆಡ್ಡಿ ತಂಡ ಕಣ್ಣಿಟ್ಟಿತ್ತು.

ಸಿಸಿಟಿವಿ ಕೊಟ್ಟಿತ್ತು ಆರೋಪಿ ಕ್ಲೂ!

ಆರೋಪಿ ಸರಗಳ್ಳ ಸಂತೋಷ್ ಮುಖ ಚಹರೆ ಗೊತ್ತಿರಲಿಲ್ಲ. ಸಿಸಿಟಿವಿಯಲ್ಲಿ ಆರೋಪಿ ದೇಹದ ಮಾದರಿ, ಹೆಲ್ಮೆಟ್ ಹಾಗೂ ಬ್ಲೂ ಕಲರ್ ಶರ್ಟ್ ಬಗ್ಗೆ ಗೊತ್ತಾಗಿತ್ತು. ಅದ್ರಲ್ಲೂ ಆರೋಪಿ ಧರಿಸಿದ್ದ ಹೆಲ್ಮೆ ಟ್ ಮೇಲೆ ಇದ್ದ ಬಿಳಿಬಣ್ಣದ ಗೆರೆ ಆರೋಪಿ ಪತ್ತೆಗೆ ಸಹಕಾರವಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್!

ಆರೋಪಿ ಸಂತೋಷ್ ಬಿಕಾಂ ಓದಿದ್ದ!

ಆರೋಪಿ ಸಂತೋಷ್ ಬಿ.ಕಾಂ ಓದಿದ್ದ. ಬಳಿಕ ಈತ ಮನೆ ಇಂಟಿರಿಯರ್ ಕೆಲಸ ಮಾಡುತ್ತಿದ್ದ. ಆದರೆ ಇಂಟಿರಿಯರ್ ಕೆಲಸದಿಂದ ಬರುವ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಸರಗಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ. ಈಗ ಅರೆಸ್ಟ್​ ಆಗಿದ್ದಾನೆ.

ಶಾಲಾ ಮಕ್ಕಳನ್ನು ಸಾಗಿಸ್ತಿದ್ದ ಆಟೋ ಪಲ್ಟಿ!

ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಆಟೋ ಪಲ್ಟಿಯಾದ ಘಟನೆ ಯಾದಗಿರಿ ನಗರದ ಹೊರಭಾಗದ ವಡಗೇರಾ ಕ್ರಾಸ್ ಬಳಿ ನಡೆದಿದೆ. ಡ್ರೈವರ್ ಸೇರಿ ನಾಲ್ವರಿಗೆ ಗಾಯವಾಗಿದೆ. ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಎಲ್ಲರನ್ನೂ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿಗಳು ಅಡ್ಡ ಬಂದ ಕಾರಣ ಘಟನೆ ಸಂಭವಿಸಿದೆ.

Post a Comment

Previous Post Next Post