Siddaramaiah ಅಂದು ತಿಂದಿದ್ದು ಕಣಿಲೆ ಅಕ್ಕಿ ರೊಟ್ಟಿ , ಮಾಂಸಾಹಾರ ಅಲ್ಲ: ವೀಣಾ ಅಚ್ಚಯ್ಯ


 ಅಂದು ಸಿದ್ದರಾಮಯ್ಯ ಅವರಿಗೆ ಕೊಡಗಿನ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಅವರ ಮನೆಯಿಂದ ನಾಟಿಕೋಳಿ ಸಾರು, ಮಟನ್ ಫ್ರೈ, ಅಕ್ಕಿ ರೊಟ್ಟಿ, ಬಿದಿರು ಕಣಿಲೆ ಗೊಜ್ಜು ಸೇರಿದಂತೆ ವಿವಿಧ ಆಹಾರಗಳು ಮಾಡಿ ಮಡಿಕೇರಿಯ ಸುದರ್ಶನ್ ಗೆಸ್ಟ್ ಹೌಸ್ಗೆ ಪೂರೈಸಲಾಗಿತ್ತು.

ಕೊಡಗು: ಆಗಸ್ಟ್ 18 ರಂದು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ (Kodagu Rains) ಹಾನಿಯಾಗಿರುವ ಪ್ರದೇಶಗಳನ್ನು ಪರಿಶೀಲಿಸಲು ಬಂದಿದ್ದ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಅಂದು ಮಧ್ಯಾಹ್ನ ಮಡಿಕೇರಿಯಲ್ಲಿ (Madikeri) ಮಾಂಸಾಹಾರ (Non Veg) ಸೇವಿಸಿ ನಂತರ ಸಂಜೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ (Basaveshwara Temple) ಹೋಗಿದ್ದರು ಎನ್ನುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಕೋಳಿ ಸಾರು (Chicken Curry) ತಿಂದು ದೇವಾಸ್ಥಾನಕ್ಕೆ ಹೋಗಿರುವುದಕ್ಕೆ ಕೊಡಗಿನ ಇಬ್ಬರು ಶಾಸಕರಾದ ಅಪ್ಪಚ್ಚು ರಂಜನ್ (MLA Appachchu Ranjan) ಮತ್ತು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (MLA KG Bopaiah) ಅವರು ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಹಿಂದೂಗಳ ನಂಬಿಕೆ, ಭಾವನೆಗೆ ನೋವು ಮಾಡುವುದೇ ಸಿದ್ದರಾಮಯ್ಯ ಅವರ ಕೆಲಸ. ಸಿದ್ದರಾಮಯ್ಯರ ನಡೆಯಿಂದ ನನ್ನ ಮನಸಿಗಂತೂ ತುಂಬಾ ನೋವಾಗಿದೆ. ಅವರು ಆತ್ಮ ಮುಟ್ಟಿ ಯೋಚನೆ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾ

ಇವರಿಗೆ ದೇವರ ಮೇಲೆ ಭಕ್ತಿ ಇದೆಯಾ

ಇನ್ನು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಕಾಂಗ್ರೆಸಿನವರಿಗೆ ಯಾವ ಸಂಸ್ಕೃತಿಯೂ ಇಲ್ಲ. ದೇವಸ್ಥಾನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ. ಈ ಹಿಂದೆ ಧರ್ಮಸ್ಥಳಕ್ಕೆ ಮೀನು ಮಾಂಸ ತಿಂದು ಹೋಗಿದ್ದರು. ಈಗ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ. ಇವರಿಗೆ ದೇವರ ಮೇಲೆ ಭಕ್ತಿ ಇದೆಯಾ? ಭಕ್ತಿ ಇಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಏಕೆ ಹೋಗುವುದು ಎಂದು ಅಪ್ಪಚ್ಚು ರಂಜನ್  ಪ್ರಶ್ನಿಸಿದ್ದಾರೆ


. ?ರೆ..ದ್ದಾರೆ. ಸಿದ್ದರಾಮಯ್ಯ ಜೊತೆ ವೀಣಾ ಅಚ್ಚಯ್ಯ

ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ​; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ವೀಣಾ ಅಚ್ಚಯ್ಯ ಮನೆಯಿಂದ ಊಟ ಪೂರೈಕೆ

ಆದರೆ ಸಿದ್ದರಾಮಯ್ಯ ಅವರು ಅಂದು ಮಾಂಸಹಾರವನ್ನು ಸೇವಿಸಲೇ ಇಲ್ಲ ಎಂದು ಕಾಂಗ್ರೆಸ್‍ನ ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ ಸ್ಪಷ್ಟನೆ ನೀಡಿದ್ದಾರೆ. ಅಂದು ಸಿದ್ದರಾಮಯ್ಯ ಅವರಿಗೆ ಕೊಡಗಿನ ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ ಅವರ ಮನೆಯಿಂದ ನಾಟಿಕೋಳಿ ಸಾರು, ಮಟನ್ ಫ್ರೈ, ಅಕ್ಕಿ ರೊಟ್ಟಿ, ಬಿದಿರು ಕಣಿಲೆ ಗೊಜ್ಜು ಸೇರಿದಂತೆ ವಿವಿಧ ಆಹಾರಗಳು ಮಾಡಿ ಮಡಿಕೇರಿಯ ಸುದರ್ಶನ್ ಗೆಸ್ಟ್ ಹೌಸ್​ಗೆ ಪೂರೈಸಲಾಗಿತ್ತು.

ಸಿದ್ದರಾಮಯ್ಯ ಮಾಂಸಹಾರ ಸೇವಿಸಲೇ ಇಲ್ಲ

ಮಧ್ಯಾಹ್ನ ಊಟ ಮಾಡಿದ್ದ ಸಿದ್ದರಾಮಯ್ಯ ಅವರು ಸಂಜೆ ಕೊಡ್ಲಿಪೇಟೆಯ ಬಶವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ಅಂದು ಮಾಂಸ ಆಹಾರವನ್ನು ತಿನ್ನಲಿಲ್ಲ. ಕೊಡಗಿನ ಮಳೆಗಾಲದ ವಿಶೇಷ ಕಣಿಲೆ ಅಕ್ಕಿರೊಟ್ಟಿ ತುಪ್ಪ ತಿಂದರು. ಬಿಟ್ಟರೆ ತರಕಾರಿ ಸಾಂಬರಿನಲ್ಲಿ ಸ್ವಲ್ಪ ಅನ್ನ ಊಟ ಮಾಡಿದರು. ಅವರು ಮಾಂಸಹಾರ ಸೇವಿಸಲೇ ಇಲ್ಲ. ಸ್ವತಃ ನಾನೇ ಊಟ ಬಡಿಸಿದ್ದೇನೆ ಎಂದು ವೀಣಾ ಅಚ್ಚಯ್ಯ ಸ್ಪಷ್ಟ


ಪಡಿಸಿದ್ದಾರೆ.ವೀಣಾ ಅಚ್ಚಯ್ಯ, ಮಾಜಿ ಎಂಎಲ್​ಸಿ

ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮಾಂಸ ತಿಂದು ನಾಳೆ ದೇವಸ್ಥಾನಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ದೇವಸ್ಥಾನಕ್ಕೆ ಹೋಗುವಂತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಯಾವ ಆಹಾರ ತಿಂದು ದೇವಾಸ್ಥಾನಕ್ಕೆ ಬರಬಹುದು, ಯಾವ ಆಹಾರ ತಿಂದು ಬರಬಾರದು ಎಂದು ದೇವರು ಎಲ್ಲೂ ಹೇಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Hindu-Muslim: ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ! ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು


ಗದಗಖಾಸಗಿ ಭದ್ರತೆ  ಪಡೆಯಲು ಮಾಜಿ ಸಿಎಂ ಚಿಂತನೆ

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಬೆನ್ನಲ್ಲೇ, ಮಾಜಿ ಸಿಎಂ ಖಾಸಗಿ ಭದ್ರತೆಗೆ ಮೊರೆ ಹೋಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರ ಸರಿಯಾದ ಭದ್ರತೆ ನೀಡೋದಿಲ್ಲ ಎಂಬ ಆತಂಕ ಸಿದ್ದರಾಮಯ್ಯ ಅವರಿಗಿದೆ ಎನ್ನಲಾಗಿದೆ. ಈಗಾಗಲೇ ಸಿದ್ದರಾಮಯ್ಯ ಅವರಿಗೆ ಮೂರು ಬಾರಿ ಬೆದರಿಕೆ ಪತ್ರಗಳು ಬಂದಿವೆ. ಇದೇ ವಾರ ಸಿದ್ದರಾಮಯ್ಯ ಕಾರ್​ಗೆ ಮೊಟ್ಟೆ

Post a Comment

Previous Post Next Post