ಪೊಲೀಸರು ಅಂದ್ರೆ ಅನ್ಯಾಯಗಳನ್ನು ಮಟ್ಟಹಾಕಿ ಜನರಿಗೆ ರಕ್ಷಣೆ ಕೊಡೋರು. ಆದ್ರೆ ಇಲ್ಲೊಬ್ಬ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅರೆಸ್ಟ್ ಆಗಿದ್ದಾರೆ. ದೂರದ ರಾಜಸ್ಥಾನದ ಜೂಜು ಅಡ್ಡೆಯಲ್ಲಿ ತಗ್ಲಾಕೊಂಡಿದ್ದಾರೆ. ಇವರ ಜೊತೆ ಉಪನ್ಯಾಸಕ ಕೂಡ ಅರೆಸ್ಟ್ ಆಗಿದ್ದಾರೆ.
ಪೊಲೀಸರೆಂದರೆ ಶಿಸ್ತು. ಖಾಕಿ ಯೂನಿಫಾರಂ ಧರಿಸಿದ ಪೊಲೀಸರೆಂದರೆ (Police) ಎಲ್ಲರಿಗೂ ಗೌರವ (Respect) ಮತ್ತು ಭಯನು ಆಗುತ್ತೆ. ಪೊಲೀಸರು ಕೂಡ ಅಕ್ರಮ, ಅನ್ಯಾಯಗಳನ್ನು ಬಯಲಿಗೆಳೆದು ಜನರ ರಕ್ಷಣೆ ಮಾಡಬೇಕು. ಅದಕ್ಕಾಗಿ ಅವರನ್ನು ಆರಕ್ಷಕರು ಅಂತಾ ಹೇಳ್ತಾರೆ. ಆದ್ರೆ ಇಲ್ಲೊಬ್ಬ ಪೊಲೀಸಪ್ಪನೇ ಜೂಜಾಡಲು ಹೋಗಿ ಅರೆಸ್ಟ್ ಆಗಿದ್ದಾರೆ. ಕರ್ನಾಟಕದ (Karnataka) ಪೊಲೀಸ್ ಇನ್ಸ್ಪೆಕ್ಟರ್ ದೂರದ ರಾಜಸ್ಥಾನದಲ್ಲಿ (Rajasthan) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 3 ದಿನ ರಜಾ ಅಂತಾ ತೆರಳಿದ್ದ ಕೋಲಾರದ ಸರ್ಕಲ್ ಇನ್ಸ್ಪೆಕ್ಟರ್ ಜೂಜು (Gambling) ಆಡ್ತಾ ಇದ್ರು. ಈ ವೇಳೆ ರಾಜಸ್ಥಾನ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ (Raid) ಬಂಧಿಸಿದ್ದಾರೆ.
ಪೊಲೀಸರು ಅಂದ್ರೆ ಅನ್ಯಾಯಗಳನ್ನು ಮಟ್ಟಹಾಕಿ ಜನರಿಗೆ ರಕ್ಷಣೆ ಕೊಡೋರು. ಆದ್ರೆ ಇಲ್ಲೊಬ್ಬ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅರೆಸ್ಟ್ ಆಗಿದ್ದಾರೆ. ದೂರದ ರಾಜಸ್ಥಾನದ ಜೂಜು ಅಡ್ಡೆಯಲ್ಲಿ ತಗ್ಲಾಕೊಂಡಿದ್ದಾರೆ. ಇವರ ಜೊತೆ 84 ಮಂದಿಯನ್ನು ಬಂಧಿಸಲಾಗಿ
ದೆ.ಬಂಧಿತ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಂಜಿನಪ್ಪ
ಕೋಲಾರದ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಅರೆಸ್ಟ್
ರಾಜಸ್ಥಾನದ ಜೈಪುರದ ಸಾಯಿಪುರ ಎಂಬಲ್ಲಿ ಕೋಲಾರದ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಂಜಿನಪ್ಪ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ಆಂಜಿನಪ್ಪ ಜೂಜು ಆಡುತ್ತಿದ್ದಾಗ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾ
ರ ಬಂಧಿತ ಬಿಜೆಪಿ ನಗರಸಭೆ ನಾಮಿನಿ ಸದಸ್ಯ ಸತೀಶ್
ಇದನ್ನೂ ಓದಿ: ಸರ್ಕಾರಿ ಕೆಲಸ ಸಿಗದ್ದಕ್ಕೆ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!
3 ದಿನ ರಜೆಯ ಮೇಲೆ ತೆರಳಿದ್ದ ಆಂಜಿನಪ್ಪ
ಜೈಪುರ್ ಜಿಲ್ಲೆಯ ಜೈಸಿಂಗೇಪುರ ಖೋರ್ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ಸ್ಪೆಕ್ಟರ್ ಆಂಜಿನಪ್ಪ 3 ದಿನ ರಜೆಯ ಮೇಲೆ ತೆರಳಿದ್ದರು. ರಜೆಯಲ್ಲಿ ತೆರಳಿ ಜೂಜಾಡುತ್ತಿದ್ದಾಗ ಜೈಪುರದ ಸಾಯಿಪುರ ಬಾಗ್ ಹೋಟೆಲ್ ಮೇಲೆ ರಾಜಸ್ಥಾನ ಪೊಲೀಸರು ದಾಳಿ ಮಾಡಿ ಬಂಧಿಸಿ
ದ್ದಾರೆ.ಟೊಮ್ಯಾಟೋ ವ್ಯಾಪಾರಿ ಸುಧಾಕರ್
ಉಪನ್ಯಾಸಕ, ಟೊಮ್ಯಾಟೋ ವ್ಯಾಪಾರಿಯೂ ಅರೆಸ್ಟ್
ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಂಜಿನಪ್ಪ ಜೊತೆಗೆ ಸಬ್ ರಿಜಿಸ್ಟರ್ ಶ್ರೀನಾಥ್, ಟೊಮ್ಯಾಟೋ ವ್ಯಾಪಾರಿ ಸುಧಾಕರ್, ಒಬ್ಬ ನಗರಸಭೆ ಸದಸ್ಯ ಸತೀಶ್ ಎಂಬುವವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಉಪನ್ಯಾಸಕ ರಮೇಶ್, ಆರ್ಟಿಒ ಸಿಬ್ಬಂದಿ ಶಬರೀಶ್ ಎಂಬುವವರನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾ
ರೆ.ಬಂಧಿತ ಉಪನ್ಯಾಸಕ ರಮೇಶ್
ಬಂಧಿತ ಇನ್ಸ್ಪೆಕ್ಟರ್ ಆಂಜಿನಪ್ಪ ಅಮಾನತು
ರಾಜಸ್ಥಾನದಲ್ಲಿ ಬಂಧನಕ್ಕೊಳಗಾದ ಇನ್ಸ್ಪೆಕ್ಟರ್ ಆಂಜಿನಪ್ಪನನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ. ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ತೆರಳಿದ್ದಕ್ಕೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಅಂತಾ ಕೋಲಾರ ಎಸ್ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಂಡನ ಕೊಲೆಗೆ ಸುಪಾರಿ ಕೊಟ್ರೆ ಆ ಹಂತಕರು ಮಾಡಿದ್ದೇ ಬೇರೆ! ಸಾಯಬೇಕಾದವ ಸೀದಾ ಮನೆಗೇ ಬಂದ!
ಭಟ್ಕಳ ಬಾಲಕನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
ಭಟ್ಕಳದಲ್ಲಿ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೊಲೀಸರು ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ್ದು ಆರೋಪಿ ಅನೀಷ್ನನ್ನು ಬಂಧಿಸಿದ್ದಾರೆ. ಹಳೆಯ ದ್ವೇಷ ಮತ್ತು ಹಣಕ್ಕಾಗಿ ಈ ಕಿಡ್ನ್ಯಾಪ್ ಪ್ರಕರಣ ನಡೆದಿತ್ತು ಅನ್ನೋದು ಬೆಳಕಿಗೆ ಬಂದಿದೆ.
ಅಪಹರಣಕ್ಕೊಳಗಾದ ಬಾಲಕ ಅಲಿಸಾದ್ ಗೋವಾದ ಪಣಜಿಯ ಕಲ್ಲಂಗುಟ್ ಎಂಬಲ್ಲಿ ಪತ್ತೆಯಾಗಿದ್ದಾನೆ. ಬ್ರೆಡ್ ತರಲು ಹೋದ ಸಂದರ್ಭದಲ್ಲಿ ಈತನನ್ನು ಅಪಹರಣ ಮಾಡಲಾಗಿತ್ತು. ಅಪಹರಣದ ಮುಖ್ಯ ರೂವಾರಿ ಬಾಲಕನ ತಾಯಿಯ ಮಾವ ಇನಾಯತುಲ್ಲಾ ಅನ್ನೋದು ಗೊತ್ತಾಗಿದೆ.
ಸೌದಿ ಅರೇಬಿಯಾದಿಂದಲೇ ಸ್ಕೆಚ್!
ಪ್ರಸ್ತುತ ಸೌದಿ ಅರೆಬಿಯಾದಲ್ಲಿ ನೆಲೆಸಿರುವ ಇನಾಯತುಲ್ಲಾ ಅಲ್ಲಿದಂಲೇ ಬಾಲಕನ ಕಿಡ್ನ್ಯಾಪ್ಗೆ ಸ್ಕೆಚ್ ಹಾಕಿದ್ದ. ಹಣದ ವಿಚಾರವಾಗಿ ಹಿಂದಿನಿಂದ ಬಾಲಕನ ತಂದೆ ಇಸ್ಲಾಂ ಸಾದ್ ಮತ್ತು ಇನಾಯತುಲ್ಲಾ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಬಾಲಕ ಅಲಿಸಾದ್ನನ್ನ ಅಪಹರಣ ಮಾಡಲಾಗಿತ್ತು.
ಪ್ರಕರಣದಲ್ಲಿ ಭಾಗಿಯಾದ ಮೂವರು ಎಸ್ಕೇಪ್
ಇನ್ನು ಅಪಹರಣ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸ್ತಿದ್ದಾರೆ. ಅಪಹರಣಕಾರರು ಪದೇ ಪದೇ ವಾಹನ ಬದಲಾಯಿಸಿ ಹೋಗುವ ಸಂದರ್ಭದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರು. ಸಿಸಿ ಟಿವಿ ಫೂಟೇಜ್ ಆಧರಿಸಿ ಆರೋಪಿಗಳಿಗೆ ಬಲೆ ಹೆಣೆಯಲಾಗಿತ್ತು. ಗೋವಾ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.





Post a Comment