ಭಾನುವಾರ ರಾಮನಗರದ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ನನಗೆ ಆಶ್ಚರ್ಯ ತಂದಿಲ್ಲ. ಇದರ ಬಗ್ಗೆ ಐದಾರು ತಿಂಗಳ ಹಿಂದೆಯೇ ಚರ್ಚೆ ನಡೆದಿತ್ತು ಎಂದು ಹೇಳಿದ್ದಾರೆ.ಈ ವಿಷಯದಲ್ಲಿ ಸರ್ಕಾರ ಮುಂಜಾಗ್ರತ ಕ್ರಮವಾಗಿ ಆರಂಭಿಕ ಹಂತದಲ್ಲಿಯೇ ತನಿಖೆ ನಡೆಸಬೇಕು. ಧಾರ್ಮಿಕ ಕ್ಷೇತ್ರ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಸರ್ಕಾರ ಕೆಲಸ ನಿರ್ವಹಿಸಬೇಕಿದೆ. ಯಾರಾದ್ರೂ ಬಲವಂತವಾಗಿ ಮತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿದ್ರೆ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಡಿಕೆ ಆಗ್ರಹಿಸಿದ್ದಾರೆ.ಪೋಕ್ಸೋ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾದ್ರೆ 24 ಗಂಟೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಆದ್ರೆ ಕುಮಾರಸ್ವಾಮಿ ಅವರು ದೂರು ನೀಡಲಿಲ್ಲ ಏಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.ಶ್ರೀಗಳ ವಿರುದ್ಧ ದೂರು ಸಲ್ಲಿಸಿದ ಸಂತ್ರಸ್ತ ವಿದ್ಯಾರ್ಥಿನಿಯರು, ಮೈಸೂರಿನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ಭಾನುವಾರ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.ಇಂದು ಸಂತ್ರಸ್ತ ಬಾಲಕಿಯರು ಬೆಳಗ್ಗೆ 10 ಗಂಟೆಗೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುವ ಸಾಧ್ಯತೆಗಳಿವೆ. ಭಾನುವಾರ CWC ಕಮಿಟಿ ಮುಂದೆ ವಿದ್ಯಾರ್ಥಿನಿಯರು ಹೇಳಿಕೆ ದಾಖಲಿಸಿದ್ದರು. ಈ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಸಹ ಮಾಡಲಾಗಿದೆ.ಮೈಸೂರಿನ ಒಡನಾಡಿ ಸಂಸ್ಥೆಯ ಸದದ್ಯರ ಮುಂದೆ ಹೇಳಿದಂತೆ ಚಿತ್ರದುರ್ಗದ ಸಿಡಬ್ಲೂಸಿ ಎದುರು ವಿದ್ಯಾರ್ಥಿನಿಯರು ಯಥಾವತ್ತು ಹೇಳಿಕೆ ದಾಖಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಇಂದು ಜಡ್ಜ್ ಎದುರು ಸಂತ್ರಸ್ಥ ಬಾಲಕಿಯರ (164ಅಡಿ) ಹೇಳಿಕೆ ದಾಖಲು ಮಾಡಲಿದ್ದಾರೆ. ನ್ಯಾಯಾಧೀಶರ ಮುಂದೆಯೇ ಯಥಾವತ್ತು ಹೇಳಿಕೆ ದಾಖಲಿಸಿದ್ರೆ ಮುರುಘಾ ಶ್ರೀಗಳ ಬಂಧನವಾಗುವ ಸಾಧ್ಯತೆಗಳಿವೆ. ಶ್ರೀಗಳ ಜೊತೆ ಇತರೆ ಆರೋಪಿಗಳನ್ನು ಸಹ ಬಂಧಿಸಬಹುದಾಗಿದೆ.

Post a Comment