Midday Meal: ಟೀಚರ್ ಇವತ್ತು ನಮಗೆ ಮೊಟ್ಟೆ ಬೇಡ, ಬಾಳೆಹಣ್ಣು ಕೊಡಿ; ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು


 ಕೆಲವು ವಿದ್ಯಾರ್ಥಿಗಳು ಶ್ರಾವಣ ಮಾಸ ಸೇರಿದಂತೆ ಧಾರ್ಮಿಕ ಆಚರಣೆಗಳ ಕಾರಣ ಶುಕ್ರವಾರ ಮೊಟ್ಟೆ ಸೇವಿಸಲ್ಲ. ಹಾಗಾಗಿ ಕೆಲವರನ್ನು ಬಾಳೆಹಣ್ಣಿನಿಂದ ಮೊಟ್ಟೆಗೆ ಬದಲಾಯಿಸಲಾಯ್ತು. ಆದ್ರೆ ಪ್ರತಿದಿನವೂ ಈ ಸಮಸ್ಯೆ ಕಾಣಿಸಿಕೊಳ್ತಿದೆ

ಕರ್ನಾಟಕ ಸರ್ಕಾರ ಮಕ್ಕಳಿಗೆ ಪೌಷ್ಠಿಕ ಆಹಾರ (Protein Food) ನೀಡುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ (Midday Meal) ಮೊಟ್ಟೆ (Egg) ಪರಿಚಯಿಸಿದೆ. ಸಸ್ಯಹಾರಿ ಮಕ್ಕಳಿಗೆ ಬಾಳೆಹಣ್ಣು (Banana) ಆಥವಾ ಚಿಕ್ಕಿ (Chikky) (ಕಡಲೆಬೀಜದಿಂದ ತಯಾರಿಸಿದ ಸಿಹಿ ತಿನಿಸು) ನೀಡಲಾಗುತ್ತಿದೆ. ಆದ್ರೆ ಮಕ್ಕಳು ತಮ್ಮ ಆಯ್ಕೆಗೆ ಸ್ಥಿರವಾಗಿ ನಿಂತುಕೊಳ್ತಿಲ್ಲ. ಇದರಿಂದ ಶಿಕ್ಷಕರು (Teachers) ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಾಳೆಹಣ್ಣು ಮತ್ತು ಮೊಟ್ಟೆ ನೀಡುತ್ತದೆ. ಆದರೆ ಕೆಲ ಮಕ್ಕಳು (Children) ಪ್ರತಿದಿನವೂ ತಮ್ಮ ಆಯ್ಕೆ ಬದಲಿಸೋ ಕಾರಣ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ

ಉದಾಹರಣೆಗೆ ಓರ್ವ ವಿದ್ಯಾರ್ಥಿ ಮೊದಲ ವಾರ ಮೊಟ್ಟೆ ಆಯ್ಕೆ ಮಾಡಿಕೊಂಡಿರುತ್ತಾನೆ. ಆದ್ರೆ ಆತ ಇತರ ಮಕ್ಕಳ ಜೊತೆಯಲ್ಲಿ ಸೇರಿ ಬಾಳೆಹಣ್ಣು/ ಚಿಕ್ಕಿ ಪಡೆಯಲು ಸರತಿ ಸಾಲಿನಲ್ಲಿ ನಿಂತುಕೊಳ್ತಾರೆ. ಕೆಲವೊಮ್ಮೆ ಕೆಲವರು ಗುರುವಾರ, ಶುಕ್ರವಾರ ಅಂತಹ ದಿನಗಳಲ್ಲಿ ಮೊಟ್ಟೆ ಸೇವಿಸಲ್ಲ. ಅವರು ಸಹ ಬಾಳೆಹಣ್ಣು ಕೇಳುತ್ತಾ

ಆಹಾರ ವಿತರಣೆ ಕಷ್ಟ

ಇಂತಹ ಸಂದರ್ಭದಲ್ಲಿ ಆಹಾರವನ್ನು ಹೊಂದಿಸೋದು ಕಷ್ಟಕರವಾಗ್ತಿ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಎರಡು ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿ ನೀಡಲಾಗ್ತಿ

ಇದನ್ನೂ ಓದಿ: Covid 19: ಕರ್ನಾಟಕದಲ್ಲಿ ಹೆಚ್ಚಾಗುತ್ತಾ ಕೋವಿಡ್ ಅಬ್ಬರ? 7 ರಾಜ್ಯಗಳಿಗೆ ಕೇಂದ್ರದಿಂದ ಎಚ್ಚರಿ

ಮೊದಲ ವಾರ ಮೊಟ್ಟೆ ಸೇವಿಸಿದ್ರೆ ಮುಂದಿನ ವಾರ ಬಾಳೆಹಣ್ಣು ಕೇಳುತ್ತಾನೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಗಳೊಂದಿಗೆ ಸ್ಥಿರವಾಗಿರಲ್ಲ. ಇದರಿಂದ ಆಹಾರ ಕ್ರಮ ನಿರ್ವಹಿಸೋದು ಶಿಕ್ಷಕರಿಗೆ ತೊಂದರೆ ಆಗ್ತಿದೆ ಎಂದು ದಕ್ಷಿಣ ಕನ್ನಡದ ಅಕ್ಷರ ದಾಸೋಹದ ಕಾರ್ಯನಿರ್ವಾಹಕ ಅಧಿಕಾರಿ ಉಷಾ ಎಂ ಎಂದು ಹೇಳಿ

ಪ್ರಧಾನ ಮಂತ್ರಿ ಶಕ್ತಿ ನಿರ್ಮಾಣ್ ಅಡಿಯಲ್ಲಿ ಮೊಟ್ಟೆ ನೀಡೋದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಶೈಕ್ಷಣಿಕ ವರ್ಷದಲ್ಲಿ 46 ದಿನ ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿಯನ್ನು ನೀಡಲಾಗುತ್ತದೆ

ಶಿಕ್ಷಕರಿಗೆ ಉಂಟಾಗುತ್ತಿರುವ ಸಮಸ್ಯೆ ಏ

ನಮ್ಮ ಶಾಲೆಯಲ್ಲಿ 124 ವಿದ್ಯಾರ್ಥಿಗಳಿದ್ದಾರೆ. 12 ಮಕ್ಕಳು ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳು ಬಾಳೆಹಣ್ಣು ಆಯ್ಕೆ ಮಾಡಿಕೊಂಡರು, ಅದೇ ರೀತಿ ಮೊಟ್ಟೆ ಆರ್ಡರ್ ಮಾಡಲಾಗಿತ್ತು. ಆದ್ರೆ ಎರಡನೇ ವಾರ ನಮಗೆ ಶಾಕ್ ಕಾದಿತ್ತು. ಮೊಟ್ಟೆ ಆಯ್ಕೆ ಮಾಡಿಕೊಂಡವರು ತಮಗೂ ಬಾಳೆಹಣ್ಣು ಅಥವಾ ಚಿಕ್ಕಿ ನೀಡಬೇಕೆಂದು ಬೇಡಿಕೆ ಇರಿಸಿದ

ಕೆಲವು ವಿದ್ಯಾರ್ಥಿಗಳು ಶ್ರಾವಣ ಮಾಸ ಸೇರಿದಂತೆ ಧಾರ್ಮಿಕ ಆಚರಣೆಗಳ ಕಾರಣ ಶುಕ್ರವಾರ ಮೊಟ್ಟೆ ಸೇವಿಸಲ್ಲ. ಹಾಗಾಗಿ ಕೆಲವರನ್ನು ಬಾಳೆಹಣ್ಣಿನಿಂದ ಮೊಟ್ಟೆಗೆ ಬದಲಾಯಿಸಲಾಯ್ತು. ಆದ್ರೆ ಪ್ರತಿದಿನವೂ ಈ ಸಮಸ್ಯೆ ಕಾಣಿಸಿಕೊಳ್ತಿದೆ ಎಂದು ಮೂಡುಬಿದಿರೆ ಬ್ಲಾಕ್ ಶಿಕ್ಷಣ ವ್ಯಾಪ್ತಿ ಶಾಲೆಯ ಮುಖ್ಯೋಪಾಧ್ಯಾಯರು ಹೇಳುತ್ತಾರೆ. ರು.ನು?.ದರು.ಕೆ!ದೆ.ರೆ..ಪಾಧ್ಯಾಯರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಆರು ದಿನವೂ ಬಗೆ ಬಗೆಯ ಊಟ

ರಾಜ್ಯ ಸರ್ಕಾರ 2022-23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆಯಡಿ (Poshan abhiyaan) ಶಾಲೆಗಳ ಮಧ್ಯಾಹ್ನ ಊಟದ (Mid Day Meal) ಮೆನು ಸಿದ್ಧಪಡಿಸಿದೆ. ಹೊಸ ಮೆನು ಕಂಡು ವಿದ್ಯಾರ್ಥಿಗಳು (Students) ಸಂತೋಷ ವ್ಯಕ್ತಪಡಿಸಿದ್ದಾರೆ. ಹೊಸ ಮೆನುವಿಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರದೇಶಕ್ಕೆ ಅನುಗುಣವಾಗಿ ಬಗೆ ಬಗೆಯ ಊಟ ಸಿಗಲಿದೆ. ಇದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ (Quality Food) ಲಭ್ಯವಾಗಲಿದೆ.

ಪ್ರತಿ ದಿನ ಮಧ್ಯಾಹ್ನ ಮಕ್ಕಳಿಗೆ ಒಂದೇ ರೀತಿಯ ಆಹಾರ ನೀಡೋದರಿಂದ ಅಪೌಷ್ಟಿಕತೆ ಹೆಚ್ಚಾಗುವ ಸಾಧ್ಯತೆಗಳಿತ್ತು. ಈ ಹಿನ್ನೆಲೆ ಮಕ್ಕಳಿಗೆ ಬೇರೆ ಬೇರೆ ಗುಣಮಟ್ಟದ ಆಹಾರ ನೀಡುವಂತೆ ಕೇಂದ್ರ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ಹೊಸ ಮೆನು


ಸಿದ್ಧವಾಗಿದೆ.ಸಾಂದರ್ಭಿಕ ಚಿತ್ರ

ಇದನ್ನೂ ಓದಿ: Heavy Rain: ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ; ರಸ್ತೆಯಲ್ಲಿ ಬಿರುಕು, ಮನೆಗಳು ಕುಸಿತ 

ಹೊಸ ಆಹಾರ ಪಟ್ಟಿಯಲ್ಲಿ ಏನೇನಿದೆ?

ಸೋಮವಾರ: ಅನ್ನ, ಸಾಂಬಾರು

ಮಂಗಳವಾರ: ಪಲಾವ್‌, ದಾಲ್‌ ತೊವ್ವೆ, ಅಥವಾ ಟೊಮೆಟೊ ಬಾತ್‌ ಹಾಗೂ ತರಕಾರಿ ಪಲ್ಯ

ಬುಧವಾರ: ಅನ್ನ, ರಸಂ ಮತ್ತು ಕಾಳು ಪಲ್ಯ ಅಥವಾ ತರಕಾರಿ ಪಲ್ಯ

ಗುರುವಾರ: ಅನ್ನ, ಸಾಂಬಾರು

ಶುಕ್ರವಾರ: -ಬಿಸಿ ಬೇಳೆ ಬಾತ್‌

ಶನಿವಾರ: ಉಪ್ಪಿಟ್ಟು ಅಥವಾ ಚಪಾತಿ ಮತ್ತು ಪಲ್ಯ

Post a Comment

Previous Post Next Post