ಬಿಬಿಎಂಪಿ (BBMP) ದಾಖಲೆಗಳಲ್ಲಿ ಈದ್ಗಾ ಮೈದಾನದ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ (Revenue Department) ಆಸ್ತಿಯೆಂದು ನಮೂದಿಸಲು ಸೂಚನೆ ನೀಡಲಾಗಿದೆ . ಈ ಬಗ್ಗೆ ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.
ಈದ್ಗಾ ಮೈದಾನ (Idgah Maidan) ವಿವಾದದ ಕುರಿತಾಗಿ ವಕ್ಫ್ ಬೋರ್ಡ್ (Waqf Board) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈದ್ಗಾ ಮೈದಾನ ಸರ್ಕಾರದ ಆಸ್ತಿ (Government Property) ಎಂದು ಘೋಷಣೆ ಮಾಡಲಾಗಿದೆ., ಚಾಮರಾಜಪೇಟೆ ಆಟದ ಮೈದಾನವನ್ನ ವರ್ಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ಅರ್ಜಿ ವಜಾಗೊಂಡಿದೆ. ಬಿಬಿಎಂಪಿ (BBMP) ದಾಖಲೆಗಳಲ್ಲಿ ಈದ್ಗಾ ಮೈದಾನದ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ (Revenue Department) ಆಸ್ತಿಯೆಂದು ನಮೂದಿಸಲು ಸೂಚನೆ ನೀಡಲಾಗಿದೆ . ಈ ಬಗ್ಗೆ ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನವನ್ನು ಸರ್ಕಾರದ ಆಸ್ತಿ ಎಂದು ಬಿಬಿಎಂಪಿ ಘೋಷಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂಕೋರ್ಟ್ 1965ರಲ್ಲಿ ಮೈದಾನ ವಕ್ಫ್ ಬೋರ್ಡ್ ದು ಅಂತ ತೀರ್ಪು ಕೊಟ್ಟಿದೆ. ಈಗ ಬಿಬಿಎಂಪಿ ಅವರದ್ದೇ ಒಂದು ಆದೇಶ ಹೊರಡಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಆದೇಶ ಪ್ರಶ್ನಿಸಿ ಕಾನೂನು ಹೋರಾಟ
ಬಿಬಿಎಂಪಿ ಆದೇಶವನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತೇವೆ. ಬಿಬಿಎಂಪಿಯೇ ಒಂದು ಘಟ್ಟದಲ್ಲಿ ಇದು ನಮ್ಮ ಆಸ್ತಿಯಲ್ಲ ಎಂದು ಹೇಳಿತ್ತು. ಈಗ ರಾಜ್ಯ ಕಂದಾಯ ಇಲಾಖೆಗೆ ಎಂದು ಆದೇಶ ಮಾಡಿದೆ. ಈ ಬಗ್ಗೆ ನಾವು ಕಾನೂನು ತಜ್ಞರಲ್ಲಿ ಚರ್ಚೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಶಾಫಿ ಸಅದ ಹೇಳಿಕೆ ನೀಡಿ
ದ್ದಾರೆ ಚಾಮರಾಜಪೇಟೆಯ ಈದ್ಗಾ ಮೈದಾನದ ಒಂದು ನೋಟ (ಚಿತ್ರಕೃಪೆ: ದಿ ಹಿಂದೂಸ್ತಾನ್ ಗೆಜೆಟ್)
ಇದನ್ನೂ ಓದಿ: ಈದ್ಗಾ ಮೈದಾನ ಎಂದರೇನು ಗೊತ್ತಾ? ಚಾಮರಾಜಪೇಟೆಯಲ್ಲಿ ವಿವಾದ ಉಂಟಾಗಿದ್ದೇಕೆ?
ಈದ್ಗಾ ಮೈದಾನ ತಮಗೆ ಸೇರಿದೆ ಎಂಬುದಕ್ಕೆ ದಾಖಲೆ ಸಲ್ಲಿಸಲು ವಕ್ಫ್ ಬೋರ್ಡ್ಗೆ ಬಿಬಿಎಂಪಿ (BBMP) ಸಮಯವಕಾಶ ನೀಡಿತ್ತು. ಅಂತಿಮ ದಿನ ಆಗಸ್ಟ್ 3 ಕಳೆದ್ರೂ ದಾಖಲೆ ಸಲ್ಲಿಸಲು ವಕ್ಫ್ ವಿಫಲವಾಗಿತ್ತು. ಹೀಗಾಗಿ ಪಾಲಿಕೆ (Corporation) ಈ ಆಸ್ತಿ ತಮ್ಮದೇ ಅಂತ ಘೋಷಿಸಿದೆ.
ಈದ್ಗಾ ಮೈದಾನ ಯಾರದ್ದು?
ವಕ್ಫ್ ಬೋರ್ಡ್ ಈವರೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಹಾಗೂ ಹಲವು ವರ್ಷಗಳ ಹಿಂದಿನ ತೆರಿಗೆ ಕಟ್ಟಿರುವ ಬಿಲ್ ಮಾತ್ರ ಹಾಜರುಪಡಿಸಿದೆ. ಇದರ ಹೊರತಾಗಿ ಬೇರೆ ಯಾವುದೇ ದಾಖಲೆ ವಕ್ಫ್ ಬೋರ್ಡ್ ನಿಂದ ಸಲ್ಲಿಕೆಯಾಗಿಲ್ಲ. ಈ ವಿಚಾರ ಬಿಬಿಎಂಪಿ ಇನ್ ಹೌಸ್ ಪ್ರೊಸೀಡಿಂಗ್ಸ್ ಕೂಡ ನಡೀತಿದ್ದು ಸಮರ್ಪಕ ದಾಖಲೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಯದ್ದೇ ಎಂದು ಸಾಬೀತು ಆಗಿದೆ.
ವಿವಾದಿತ ಮೈದಾನದಲ್ಲಿ ಆಗಸ್ಟ್ 15 ಕ್ಕೆ ಧ್ವಜಾರೋಹಣ ಮಾಡಲು ಅವಕಾಶ ಕೋರಿ ಮನವಿ
ಈ ವಿವಾದಿತ ಮೈದಾನ ಬಿಬಿಎಂಪಿ ಆಟದ ಮೈದಾನ ಎಂದು ಘೋಷಿಸುವಂತೆ ಹೋರಾಟಕ್ಕೆ ಇಳಿದಿದ್ದೇ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆ. ಇವರು ಈಗ ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ. ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೂ ಮನವಿ ನೀಡಲಾಗಿದೆಯಾದರೂ ಈ ವರೆಗೆ ಅನುಮತಿ ಸಿಗಲಿಲ್ಲ.
ಇದನ್ನೂ ಓದಿ: Bengaluru Mosque: ಒತ್ತುವರಿ ಆರೋಪ, ಮಸೀದಿ ಕೆಡವಲು ಮುಂದಾದ ಬಿಬಿಎಂಪಿ
ಗಣೇಶ ಮೂರ್ತಿಗಳ ಮಳಿಗೆ ಆರಂಭಿಸಿಬಾರದು ಯಾಕೆ?
ದಾಖಲೆಗಳ ಪ್ರಕಾರ ಜಮೀನು ಪಾಲಿಕೆಗೆ ಸೇರುತ್ತದೆ. ಈ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಬೇಕಿದೆ. ಸಾರ್ವಜನಿಕರಿಗೆ ಭೂಮಿಯನ್ನು ಇತರ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡೋವರೆ
ಗೂ ಮುಂದುವರಿಯಲಿದೆ.ಈದ್ಗಾ ಮೈದಾನ
ಈ ಮೈದಾನದಲ್ಲಿ ಬಕ್ರಿದ್ ಅಂಗವಾಗಿ ಕುರಿ, ಮೇಕೆಗಳನ್ನು ಮಾರಾಟ ಮಾಡಲು ಅವಕಾಶ ಇರೋವಾಗ, ನಾವ್ಯಾಕೆ ಗಣೇಶ ಮೂರ್ತಿಗಳ ಮಳಿಗೆ ಆರಂಭಿಸಬಾರದು ಎಂದು ವಿಶ್ವ ಸನಾತ ಪರಿಷತ್ತಿನ ಅಧ್ಯಕ್ಷ ಭಾಸ್ಕರನ್ ಪ್ರಶ್ನೆ ಮಾಡುತ್ತಾರೆ.
Post a Comment