Ganesh Chaturthi 2022: ಹಬ್ಬಕ್ಕಾಗಿ ಮನೆಯಲ್ಲೇ ಹಾಕಿಕೊಳ್ಳಬಹುದಾದ ಸಿಂಪಲ್​​​ ಮೆಹಂದಿ ಡಿಸೈನ್​ಗಳು ಇಲ್ಲಿವೆ ನೋಡಿ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶನ ಅಲಂಕಾರ ಮಾತ್ರವಲ್ಲ, ಯುವತಿಯರು ಹಬ್ಬಕ್ಕೆ ಅಲಂಕರಿಸಿಕೊಳ್ಳುವುದು ಹಬ್ಬ ಕಳೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಹಬ್ಬಕ್ಕಾಗಿ ಮನೆಯಲ್ಲೇ ಹಾಕಿಕೊಳ್ಳಬಹುದಾದ ಮೆಹಂದಿ ಡಿಸೈನ್ಗಳು ಇಲ್ಲಿವೆ ನೋಡಿ..


 ಹಬ್ಬದಲ್ಲಿ ಕೈಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಯಾರಿಗಾದರೂ ಒಪ್ಪುತ್ತೆ. (Image: Shutterstock)
ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಅವಿವಾಹಿತ ಮಹಿಳೆಯರು ಬಯಸಿದ ವರನನ್ನು ಪಡೆಯಲು ಉಪವಾಸವನ್ನು ಮಾಡುತ್ತಾರೆ. ವಿವಾಹಿತರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಇದನ್ನು ಆಚರಿಸುತ್ತಾರೆ ಮತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುವುದರ ಜೊತೆಗೆ ಹದಿನಾರು ಅಲಂಕಾರಗಳನ್ನು ಮಾಡುತ್ತಾರೆ.
ನಂಬಿಕೆಗಳ ಪ್ರಕಾರ, ಪಾರ್ವತಿ ದೇವಿಯು ಶಿವನನ್ನು ತನ್ನ ಪತಿಯಾಗಿ ಪಡೆಯಲು ಉಪವಾಸ ಮಾಡುತ್ತಾಳೆ. ಅದನ್ನು ಈ ದಿನವು ಸೂಚಿಸುತ್ತದೆ. (Image: Shutterstock)
ಈ ರೀತಿ ಕೈ ತುಂಬಾ ಗೋರಂಟಿ ಹಾಕಿಕೊಳ್ಳುವುದು ಕೊಂಚ ಸಮಯ ಹಿಡಿದರು, ಇದರ ಸೊಬಗಿಗೆ ನಿಜಕ್ಕೂ ಸಾಟಿಯಿಲ್ಲ.
ಮೆಹಂದಿ ರಂಗಿನಲ್ಲಿ ಗಣಪನ ತಂದೆ-ತಾಯಿ ಶಿವ ಪಾರ್ವತಿಯ ಚಿತ್ರವೂ ಕಂಡು ಬಂದಿದ್ದು ಹೀಗೆ
ಅಂಗೈಯಲ್ಲಿ ಮಾತ್ರವಲ್ಲ ಕೈಗಳ ಮೇಲೂ ಮೆಹಂದಿ ರಂಗು ನಿಜಕ್ಕೂ ಹಬ್ಬವೇ ಸರಿ.
ಕೈ-ಕಾಲು ಎರಡಕ್ಕೂ ಮೆಹಂದಿ ಹಾಕಿಸಿಕೊಳ್ಳುವವರಿದ್ದರೆ ಮೊದಲೇ ಡಿಸೈನ್ ಸೆಲೆಕ್ಟ್ ಮಾಡಿ. ಇದಕ್ಕಾಗಿ ಕೆಲ ಗಂಟೆಗಳ ಇರಬೇಕು ಎಂಬುವುದನ್ನು ಮರೆಯಬೇಡಿ.
ಇಂತಹ ಸಿಂಪಲ್ ಡಿಸೈನ್ ಅನ್ನು ನೀವೇ ಫೋಟೋದಲ್ಲಿ ನೋಡಿಕೊಂಡು ನಿಮ್ಮ ಕೈಗಳ ಮೇಲೆ ಚಿತ್ತಾರ ಮೂಡಿಸಬಹುದು.
ನಿಮ್ಮ ಮೆಹಂದಿ ಈ ರೀತಿ ಗಾಢವಾಗಿ ಕಾಣಿಸಿಕೊಂಡರೆ ನಿಮ್ಮ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಅರ್ಥ
ಮೆಹಂದಿಯನ್ನು ತೊಳೆದ ತಕ್ಷಣ ಕೆಲವರಿಗೆ ರಂಗು ಮಂಕಾಗಿ ಕಾಣಬಹುದು, ಆದರೆ ಒಂದು ದಿನ ಕಳೆದ ಮೇಲೆ ಬಣ್ಣ ಗಾಢವಾಗುತ್ತೆ ಚಿಂತಿಸಬೇಡಿ.

Post a Comment

Previous Post Next Post