Amrita Hospital: ಫರಿದಾಬಾದ್‌ನಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಲಿರುವ ಅಮೃತಾ ಆಸ್ಪತ್ರೆ ಏಷ್ಯಾದ ಅತಿದೊಡ್ಡ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಎನಿಸಿಕೊಳ್ಳಲಿದೆ. ಈ ಆಸ್ಪತ್ರೆ ಶೀಘ್ರದಲ್ಲೇ ಸೌರಶಕ್ತಿ ಚಾಲಿತವಾಗಲಿದೆ ಎಂದು ಹೇಳಲಾಗಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು (Prime Minister Narendra Modi) ಆಗಸ್ಟ್ 24 ರಂದು ಹರಿಯಾಣ ಮತ್ತು ಪಂಜಾಬ್‌ಗೆ ಭೇಟಿ ನೀಡಲಿದ್ದು, ಎರಡು ರಾಜ್ಯಗಳಲ್ಲಿ ತಲಾ ಒಂದೊಂದು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ 'ಅಮೃತಾ ಆಸ್ಪತ್ರೆ' (Amrita Hospital) ಮತ್ತು ಪಂಜಾಬ್‌ನ ಮೊಹಾಲಿಯ ನ್ಯೂ ಚಂಡೀಗಢದಲ್ಲಿ 'ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವನ್ನು (Homi Bhabha Cancer Hospital & Research Centre) ಮೋದಿ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಸೋಮವಾರ ಮಾಹಿತಿ ನೀಡಿದೆ. ಫರೀದಾಬಾದ್ನ ಅಮೃತಾ ಆಸ್ಪತ್ರೆ ಒಟ್ಟು 2,600 ಬೆಡ್ಗಳನ್ನು ಹೊಂದಿದ್ದು ಏಷ್ಯಾದ ಅತಿ ದೊಡ್ಡ ಖಾಸಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಎಂದೇ ಹೇಳಲಾಗಿದೆ.
ಅಮೃತಾ ಆಸ್ಪತ್ರೆಯ ಉದ್ಘಾಟನೆಯ ಮೂಲಕ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಆಧುನಿಕ ವೈದ್ಯಕೀಯ ಮೂಲಸೌಕರ್ಯಕ್ಕೆ ಉತ್ತೇಜನ ಸಿಗಲಿದೆ. 2,600 ಹಾಸಿಗೆಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿರುವ ಅಮೃತಾ ಆಸ್ಪತ್ರೆಯನ್ನು ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತದೆ ಎಂದು ಅದು ಹೇಳಿ6000 ಕೋಟಿ ವೆಚ್ಚದಲ್ಲಿ ನಿರ್ಮಾ
ಸುಮಾರು 6,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಆಸ್ಪತ್ರೆಯು ಫರಿದಾಬಾದ್ ಮತ್ತು ಇಡೀ ಎನ್‌ಸಿಆರ್ ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಮೊಹಾಲಿ ಆಸ್ಪತ್ರೆಯು ಪಂಜಾಬ್ ಮತ್ತು ನೆರೆಯ ಪ್ರದೇಶದ ಜನರಿಗೆ ವಿಶ್ವ ದರ್ಜೆಯ ಕ್ಯಾನ್ಸರ್ ಆರೈಕೆಯನ್ನು ಒದಗಿಸುವ ಪ್ರಯತ್ನದ ಭಾಗವಾಗಿದೆ ಎಂದು ಪಿಎಂಒ ಕಚೇರಿ ತಿಳಿಸಿದೆ
ಈ ದಾಖಲೆ ನಿರ್ಮಿಸಿದ್ದ ಅಮೃತಾ ಆಸ್ಪತ್ರೆ
ಇದೇ ಅಮೃತಾ ಆಸ್ಪತ್ರೆಯ ಕೊಚ್ಚಿ ಶಾಖೆಯು ಭಾರತದ ಮೊದಲ ಮತ್ತು ಎರಡನೇ ಯಶಸ್ವಿ ಡಬಲ್ ಹ್ಯಾಂಡ್ ಟ್ರಾನ್ಸ್‌ಪ್ಲಾಂಟ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಮತ್ತು 19 ವರ್ಷದ ಬಾಲಕಿ ಶ್ರೇಯಾ ಸಿದ್ದನಗೌಡರ ಅವರಿಗೆ ಏಷ್ಯಾದ ಮೊದಲ ತೋಳಿನ ಡಬಲ್ ಹ್ಯಾಂಡ್ ಟ್ರಾನ್ಸ್‌ಪ್ಲಾಂಟ್ ಅನ್ನು ಅಮೃತಾ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಪ್ರಪಂಚದಾದ್ಯಂತದ ಆರೋಗ್ಯ ತಜ್ಞರು ಈ ಕಸಿ ಚಿಕಿತ್ಸೆಯನ್ನು ಪ್ರಶಂಸಿಸಿದ್ದಾರೆ. 2015 ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ಅಮೃತಾ ಆಸ್ಪತ್ರೆಯಲ್ಲಿ ಕೈ ಕಸಿ ತಂಡಕ್ಕೆ "ದಕ್ಷಿಣ ಏಷ್ಯಾದ ಅತ್ಯುತ್ತಮ ಶಸ್ತ್ರಚಿಕಿತ್ಸಾ ತಂಡ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹು
ಏಷ್ಯಾದ ಅತಿ ದೊಡ್ಡ ಖಾಸಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
ಫರಿದಾಬಾದ್‌ನಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಲಿರುವ ಅಮೃತಾ ಆಸ್ಪತ್ರೆ ಏಷ್ಯಾದ ಅತಿದೊಡ್ಡ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಎನಿಸಿಕೊಳ್ಳಲಿದೆ. ಈ ಆಸ್ಪತ್ರೆ ಶೀಘ್ರದಲ್ಲೇ ಸೌರಶಕ್ತಿ ಚಾಲಿತವಾಗಲಿದೆ ಎಂದು ಹೇಳಲಾಗಿದೆ. ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಡೈರೆಕ್ಟರ್ ಡಾ.ಸಂಜೀವ್ ಕೆ ಸಿಂಗ್ ಪ್ರಕಾರ, ಸಂಶೋಧನಾ ಸಹಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾ
ಇದನ್ನೂ ಓದಿ: Bihar: ಬಹುಮತ ಸಾಬೀತುಪಡಿಸಲಿದೆ ಮಹಾಘಟಬಂಧನ್ ಸರ್ಕಾರ, ಶಾಸಕರಿಗೆ ವಿಪ್ ಜಾರಿ ಮಾಡಿದ ತೇಜಸ್ವಿ ಯಾ
ಸಂಶೋಧನೆಗೆ ಒತ್ತು
ಆಸ್ಪತ್ರೆಯು ಏಳು ಅಂತಸ್ತಿನ ಕಟ್ಟಡದಲ್ಲಿ ಮೀಸಲಾದ ಸಂಶೋಧನಾ ಬ್ಲಾಕ್ ಅನ್ನು ಹೊಂದಿದೆ. ಇದು ಒಟ್ಟು ಮೂರು ಲಕ್ಷ ಚದರ ಅಡಿಗಳಷ್ಟು ವಿಶೇಷವಾದ ಗ್ರೇಡ್ A ಯ D GMP ಲ್ಯಾಬ್‌ಗಳನ್ನು ಹೊಂದಿದೆ. ನಾವು ವೈದ್ಯಕೀಯ ವಿಜ್ಞಾನದಲ್ಲಿ ವಿಶ್ವದ ಕೆಲವು ದೊಡ್ಡ ಸಂಸ್ಥೆಗಳ ಜೊತೆ ಸಂಶೋಧನಾ ಸಹಯೋಗವನ್ನು ಪ್ರವೇಶಿಸುವ ಪ್ರಕ್ರಿಯೆಯಲ್ಲಿದ್ದೇವೆ. ಅಮೃತಾ ಅವರ ಕಸಿ ಹೆಚ್ಚು ಜನಪ್ರಿಯವಾಗಿದೆ ಎಂದು ಡಾ ಸಂಜೀವ್ ಸಿಂಗ್ ಅವರು ತಿಳಿಸಿದ್ದಾರೆ
ಇದನ್ನೂ ಓದಿ: JNU Controversy: ಶಿವ ಸೇರಿದಂತೆ ಯಾವ ದೇವರೂ ಬ್ರಾಹ್ಮಣನಲ್ಲ! ಜೆಎನ್‌ಯು ಉಪ ಕುಲಪತಿ ವಿವಾದಾತ್ಮಕ ಹೇಳಿ
ಅಮೃತಾ ಆಸ್ಪತ್ರೆಯಲ್ಲಿ ದೊರೆಯುವ ಸಮಗ್ರ ಕಸಿ ಕಾರ್ಯಕ್ರಮವು ದೇಶದಲ್ಲೇ ದೊಡ್ಡ ಹೆಸರು ಗಳಿಸಿದೆ. ಅಮೃತಾ ಆಸ್ಪತ್ರೆ, ಕೊಚ್ಚಿಯು ಭಾರತದ ಮೊದಲ ಎರಡು ಡಬಲ್ ಹ್ಯಾಂಡ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಮತ್ತು ದೇಶದ ಮೊದಲ ಮೇಲಿನ ತೋಳಿನ ಡಬಲ್ ಹ್ಯಾಂಡ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗಳನ್ನು ನಡೆಸಿದ ಖ್ಯಾತಿ ಹೊಂದಿದೆ. ಈ ಸೌಲಭ್ಯವು ಫರಿದಾಬಾದ್ನ ಹೊಸ ಅಮೃತಾ ಆಸ್ಪತ್ರೆಯಲ್ಲೂ ದೊರೆಯಲಿದೆ. ಕೆ. ದವ್!ರೆ.ದು.!.ಣದೆ. ಸ್ಪತ್ರೆಯಲ್ಲೂ ದೊರೆಯಲಿದೆ.

Post a Comment