ಓಟರ್ ಐಡಿ ಆಪ್ ಲಿಂಕ್ ಮಾಡುವ ವಿಚಾರದಲ್ಲಿ ಬೆಂಗಳೂರಿಗರು ಕೊನೆಯ ಸ್ಥಾನದಲ್ಲಿದ್ದಾರೆ. ಅಚ್ಚರಿ ವಿಷಯವೆಂದರೆ ರಾಜಧಾನಿ ಪಕ್ಕದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.60ರಷ್ಟು ಲಿಂಕ್ ಮಾಡಿಸಿದ್ದಾರೆ. ಈ ಮೂಲಕ ಶಿರಾ ಟಾಪ್ ಪ್ಲೇಸ್ನಲ್ಲಿದೆ. ಆದರೆ ಬೆಂಗಳೂರಿಗರ ಕಾರ್ಯ ಶೇಕಡಾವಾರು ಶೇ.1ರಷ್ಟು ಇಲ್ಲ.
ನಮ್ಮ ಬೆಂಗಳೂರು ಬೆಳೆಯುತ್ತಿರೋ ನಗರ. ಕೆಲಸ (Job) ಅಂತಾ ಸಾವಿರಾರು ಜನ ಬೆಂಗಳೂರನ್ನು ಅರಸಿ ಬರ್ತಾರೆ. ಐಟಿ ಬಿಟಿ ಕಂಪೆನಿ (IT Company) , ಜನವಸತಿ ಪ್ರದೇಶ, ಶಾಪಿಂಗ್ ಹೀಗೇ ಏನೇ ವಿಚಾರ ಬಂದ್ರೆ ಬೆಂಗಳೂರು (Bengaluru) ಟಾಪ್ನಲ್ಲಿರುತ್ತೆ. ಪ್ರತಿಯೊಂದು ವಿಚಾರದಲ್ಲಿಯೂ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿರುತ್ತಿತ್ತು (Top Place). ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬೆಂಗಳೂರಿಗೆ ಗರಿಮೆ ಹೆಚ್ಚುತ್ತಿರುತ್ತೆ. ಆದರೆ ಚುನಾವಣೆ (Election) ಬಂತಂದ್ರೆ ಸಾಕು ಕೊನೆಯ ಸ್ಥಾನಕ್ಕೆ (Last Place) ಹೋಗಿಬಿಡುತ್ತೆ. ಎಲೆಕ್ಷನ್ ಬಂದರೆ ಸಾಕು ಸಿಲಿಕಾನ್ ಸಿಟಿ ಜನ ನಿರ್ಲಕ್ಷ್ಯ ತೋರುತ್ತಾರೆ. ಅಂದಹಾಗೇ ಅಷ್ಟಕ್ಕೂ ಯಾವ ವಿಚಾರಕ್ಕೆ ಬೆಂಗಳೂರು ಲಾಸ್ಟ್ ಪ್ಲೇಸ್ನಲ್ಲಿದೆ ಅನ್ನೋದನ್ನು ನೋಡೋಣ
ಬೆಂಗಳೂರು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಐಟಿಬಿಟಿ ಸಿಟಿಯಾಗಿ ಬೆಂಗಳೂರು ಬೆಳೆಯುತ್ತಿದೆ. ಆದರೆ ಜವಾಬ್ದಾರಿ ಹೊಂದುವಲ್ಲಿ ಇಲ್ಲಿನ ಜನರು ಹಿಂದೇಟು ಹಾಕ್ತಿದಾರೆ ಅಂದೆನಿಸುತ್ತಿದೆ. ಯಾಕೆಂದರೆ ಇಲ್ಲಿನ ಜನರು ಮತ ಹಾಕಲು ಮಾತ್ರವಲ್ಲ ಓಟರ್ ಐಡಿ ಜೊತೆ ಆಧಾರ್ ಲಿಂಕ್ ಮಾಡಿಸಲು ನಿರುತ್ಸಾಹ ತೋರುತ್ತಿದಾರೆ.
ಓಟರ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡೋ ಕಾರ್ಯ ಶುರು
ಅಕ್ರಮ ಮತದಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಓಟರ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡೋ ಕಾರ್ಯ ಶುರುವಾಗಿದೆ. ಸದ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹೊಸ್ತಿನಲ್ಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಓಟರ್ ಐಡಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿದೆ.
ಇದನ್ನೂ ಓದಿ: ಬೆಂಗಳೂರಿನ ದಾಸರಹಳ್ಳಿಯ ಶಾಲೆಯಲ್ಲಿದೆ ಶಿಕ್ಷಕರ ಹುದ್ದೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು ಲಾಸ್ಟ್, ಶಿರಾ ಫಸ್ಟ್
ಓಟರ್ ಐಡಿ ಆಪ್ ಲಿಂಕ್ ಮಾಡುವ ವಿಚಾರದಲ್ಲಿ ಬೆಂಗಳೂರಿಗರು ಕೊನೆಯ ಸ್ಥಾನದಲ್ಲಿದ್ದಾರೆ. ಅಚ್ಚರಿ ವಿಷಯವೆಂದರೆ ರಾಜಧಾನಿ ಪಕ್ಕದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.60ರಷ್ಟು ಲಿಂಕ್ ಮಾಡಿಸಿದ್ದಾರೆ. ಈ ಮೂಲಕ ಶಿರಾ ಟಾಪ್ ಪ್ಲೇಸ್ನಲ್ಲಿದೆ. ಆದರೆ ಬೆಂಗಳೂರಿಗರ ಕಾರ್ಯ ಶೇಕಡಾವಾರು ಶೇ
.1ರಷ್ಟು ಇಲ್ಲ.ಬಿಬಿಎಂಪಿ-ಚುನಾವಣಾ ಆಯೋಗ ಸಭೆ
ಅತಿ ಕಡಿಮೆ ಓಟರ್ ಐಡಿ ಲಿಂಕ್ ಆದ ಬೆಂಗಳೂರಿನ ಕ್ಷೇತ್ರಗಳು
ಸಿ.ವಿ.ರಾಮನ್ ನಗರ-ಶೇ.0.39
ಮಲ್ಲೇಶ್ವರಂ- ಶೇ.0.46
ಚಾಮರಾಜಪೇಟೆ- ಶೇ.0.47
ಶಾಂತಿನಗರ- ಶೇ.0.63
ಚಿಕ್ಕಪೇಟೆ- ಶೇ.0.71
ಹೆಬ್ಬಾಳ- ಶೇ.0.72
ಕೇವಲ 940 ಮಂದಿಯಿಂದ ಆಧಾರ್ ಲಿಂಕ್!
ಓಟರ್ ಐಡಿ ಜೊತೆ ಆಧಾರ್ ಲಿಂಕ್ ಮಾಡಿಕೊಳ್ಳಲು ಸಿಲಿಕಾನ್ ಸಿಟಿ ಜನರ ಹಿಂದೇಟು ಹಾಕ್ತಿದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 94 ಲಕ್ಷಕ್ಕೂ ಅಧಿಕ ಜನ ಮತದಾರರಿದ್ದಾರೆ. ಈ ಪೈಕಿ ಕೇವಲ 940 ಮಂದಿ ಮತದಾರರು ಮಾತ್ರ ಎಪಿಕ್ ಆಧಾರ್ ಲಿಂಕ್ ಆಗಿದೆ. ಆಗಸ್ಟ್ 1ರಿಂದ ಆಗಸ್ಟ್ 22ರವರೆಗೆ ಬೆಂಗಳೂರಿನಲ್ಲಿ ಕೇವಲ 1 % ಜನರಷ್ಟೇ ವೋಟರ್ ಐಡಿಯನ್ನ ಆಧಾರ್ ಕಾರ್ಡ್ಗೆ ಲಿಂಕ್ ಮಾಡಿಸಿದ್ದಾರೆ.
ಅತಿ ಹೆಚ್ಚು ಓಟರ್ ಐಡಿ ಲಿಂಕ್ ಆದ ಕ್ಷೇತ್ರಗಳು
ಶಿರಾ- ಶೇ.60
ಯಮಕನಮರಡಿ- ಶೇ.57
ಕಾಗವಾಡ- ಶೇ.55
ಚಿಂಚೋಳಿ- ಶೇ.54
ಬದಾಮಿ- ಶೇ.53
ಗುಬ್ಬಿ- ಶೇ. 53
ಬಿಬಿಎಂಪಿ, ರಾಜ್ಯ ಚುನಾವಣಾ ಆಯೋಗಕ್ಕೆ ತಲೆನೋವು
ರಾಜ್ಯದ ಇತರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.40-60ರಷ್ಟು ಇದ್ದರೆ ರಾಜಧಾನಿಯ 28 ವಿಧಾನಸಭಾ ಕ್ಷೇತ್ರದಲ್ಲಿ ಶೇ.1ರಷ್ಟು ಆಧಾರ್ ಲಿಂಕ್ ಆಗಿಲ್ಲ. ಇದು ಬಿಬಿಎಂಪಿ, ರಾಜ್ಯ ಚುನಾವಣಾ ಆಯೋಗಕ್ಕೆ ದೊಡ್ಡ ತಲೆನೋವಾಗಿದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಅಭಿಯಾನ ಇನ್ನಷ್ಟು ಹೆಚ್ಚು ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಆಗಬೇಕಿದೆಯೇ? ಇಲ್ಲಿದೆ ನೋಡಿ
ಬೆಂಗಳೂರಿಗರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಆಧಾರ್- ಓಟರ್ ಐಡಿ ಲಿಂಕ್ ನ್ನು ರಾಜ್ಯ ಚುನಾವಣಾ ಆಯೋಗದಿಂದ ಕಡ್ಡಾಯ ಮಾಡಿಲ್ಲ. ಇದರಿಂದ ಬೆಂಗಳೂರಿಗರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ ಇದರ ಸದುದ್ದೇಶಕ್ಕೆ ಜನರಿಗೆ ಮನವರಿಕೆ ಆಗಬೇಕಿದೆ.


Post a Comment