ತನ್ನಿಂದ ಯಾವುದೇ ಪ್ರಾಣಿಗಳಿಗೆ ನೋವಾಗಬಾರದು ಎಂದು ನಂಬಿದ್ದ ಒಬ್ಬ ವರನು ಕುದುರೆ ಗಾಡಿಯ ಬದಲು ತನ್ನ ಸಹೋದರರ ಭುಜಗಳ ಮೇಲೆ ಕುಳಿತುಕೊಂಡು ತನ್ನ ಮದುವೆ ಮಂಟಪಕ್ಕೆ ಬಂದಿದ್ದಾನೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರನ್ನು ತುಂಬಾನೇ ಮೆಚ್ಚಿಸಿತು ಎಂದು ಹೇಳಬಹುದು.
ನಮ್ಮಲ್ಲಿ ಎಷ್ಟೋ ಜನರಿಗೆ ತಮ್ಮ ಮದುವೆ (Marriage) ಹೀಗೆ ಆಗಬೇಕು, ಇಂತಹದೇ ವ್ಯವಸ್ಥೆಗಳು ತಮ್ಮ ಬಾರಾತ್ ನಲ್ಲಿ ಆಗಬೇಕು ಅಂತ ಅನೇಕ ಕನಸುಗಳು ಇರುತ್ತವೆ. ಎಷ್ಟೋ ಜನರು ತಮ್ಮ ಮದುವೆಯ ದಿನ ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ ಬರುವುದನ್ನು ನಾವು ನೋಡಿದ್ದೇವೆ. ಇನ್ನೂ ಕೆಲವರು ಕುದುರೆಯನ್ನು (Horse) ಕಟ್ಟಿದ ಗಾಡಿಯಲ್ಲಿ ಕೂತು ಬರುತ್ತಾರೆ. ಮದುವೆಮೆರವಣಿಗೆಯಲ್ಲಿ ಕುದುರೆಯು ಅಲ್ಲಿ ಸಿಡಿಸುವ ಪಟಾಕಿಗಳಿಗೆ ಹೆದರಿ ಅವಕಾಶ ಸಿಕ್ಕರೆ ಅಲ್ಲಿಂದ ಓಡಿ ಹೋಗಬೇಕು ಅಂತ ಕಾಯುತ್ತಾ ಇರುತ್ತದೆ ಎಂದು ಹೇಳಬಹುದು. ಹೀಗೆ ಒಟ್ಟಿನಲ್ಲಿ ಮದುವೆ ಬಾರಾತ್ ಎಂದರೆ ವರನನ್ನು (Groom) ಮದುವೆಯ ಮಂಟಪಕ್ಕೆ ಕರೆತರಲು ಮುಗ್ದ ಪ್ರಾಣಿಯ ಬಳಕೆಯಾಗುತ್ತಲೇ ಬಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ
ನಮ್ಮಲ್ಲಿ ಎಷ್ಟು ಜನರು ತಮ್ಮ ಐಷಾರಾಮಿಗಾಗಿ ಒಂದು ಪ್ರಾಣಿಯನ್ನು ನೋಯಿಸುತ್ತಿದ್ದೇವೆ ಅಂತ ಅರ್ಥ ಮಾಡಿಕೊಳ್ಳುತ್ತೇವೆ ಹೇಳಿ? ಆದರೆ ಇಲ್ಲೊಬ್ಬ ವರ ಈ ಸೂಕ್ಷ್ಮ ವಿಚಾರವನ್ನು ಅರ್ಥ ಮಾಡಿಕೊಂಡಿದ್ದಾನೆ ನೋ
ಕುದುರೆ ಗಾಡಿಯ ಬದಲು ತನ್ನ ಸಹೋದರರ ಭುಜಗಳ ಮೇಲೆ ಕುಳಿತುಕೊಂಡು ಬಂದ ವರ
ತನ್ನಿಂದ ಯಾವುದೇ ಪ್ರಾಣಿಗಳಿಗೆ ನೋವಾಗಬಾರದು ಎಂದು ನಂಬಿದ್ದ ಒಬ್ಬ ವರನು ಕುದುರೆ ಗಾಡಿಯ ಬದಲು ತನ್ನ ಸಹೋದರರ ಭುಜಗಳ ಮೇಲೆ ಕುಳಿತುಕೊಂಡು ತನ್ನ ಮದುವೆ ಮಂಟಪಕ್ಕೆ ಬಂದಿದ್ದಾನೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರನ್ನು ತುಂಬಾನೇ ಮೆಚ್ಚಿಸಿತು ಎಂದು ಹೇಳಬಹುದು
ಇದನ್ನೂ ಓದಿ: Viral Video: ಪ್ರಿಯಕರ ಪ್ರಪೋಸ್ ಮಾಡಿದ್ದಕ್ಕೆ ಭಾವುಕಳಾದ ಯುವತಿ! ಈ ವಿಡಿಯೋ ನೋ
ಸಿಕ್ಕಾಪಟ್ಟೆ ವೈರಲ್ ಆಗಿದೆ ವರನ ವಿಡಿ
ಏಳು ದಿನಗಳ ಹಿಂದೆ ಫ್ಯೂರಿ_ಎಂಜೆಲ್ಸ್16 ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 1.37 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 17,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಇದು ಪಡೆದಿದೆ. ವರನು ತನ್ನ ಮದುವೆಯ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಬಾರದು ಎಂದು ಪಟ್ಟು ಹಿಡಿದನು, ಆದ್ದರಿಂದ ಅವನು ತನ್ನ ಸಹೋದರರ ಭುಜಗಳ ಮೇಲೆ ಮದುವೆ ಮಂಟಪಕ್ಕೆ ಬಂದನು. ಮದುವೆಯ ನಂತರ ಪ್ರಾಣಿಗಳಿಗೆ ಆಹಾರ ನೀಡುವುದಾಗಿ ಸಹ ಅವರು ಭರವಸೆ ನೀಡಿದ
ಪ್ರಾಣಿ ಹಿಂಸೆಯ ಬಗ್ಗೆ ವರ ಹೇಳಿದ್ದು ಹೀಗೆ
"ನಾನು ಯಾವಾಗಲೂ ಯಾವುದೇ ಪ್ರಾಣಿಗಳಿಗೆ ಹಾನಿಯಾಗದಂತೆ ನಾನು ಮದುವೆಯಾಗುವುದನ್ನು ಕಲ್ಪಿಸಿಕೊಂಡಿದ್ದೇನೆ. ಈ ಮದುವೆ ಮೆರವಣಿಗೆಯಲ್ಲಿ ಕುದುರೆಗೆ ಭಾರವಾದ ಬಟ್ಟೆಯನ್ನು ಮೈಮೇಲೆ ಹಾಕಿ ತುಂಬಾನೇ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ನಾನು ಯಾವಾಗಲೂ ಮದುವೆಯ ಸಮಾರಂಭದಲ್ಲಿ ಆ ಭಾಗವನ್ನು ದ್ವೇಷಿಸುತ್ತೇನೆ ಮತ್ತು ನನ್ನ ಮದುವೆಯಲ್ಲಿ, ನಾನು ಯಾವುದೇ ಪ್ರಾಣಿಯನ್ನು ಬಳಸುವುದಿಲ್ಲ ಎಂದು ಅಂದುಕೊಂಡಿದ್ದು ನಿಜ ಮತ್ತು ಅದೇ ರೀತಿಯಾಗಿ ನಡೆದುಕೊಂಡಿದ್ದೇವೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾ
ಇದನ್ನೂ ಓದಿ: Marriage Agreement: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್ರೆ
ನನ್ನ ಪತಿ ನನಗೆ ಮೊದಲೇ ಇದರ ಬಗ್ಗೆ ಭರವಸೆ ನೀಡಿದ್ದರು, ಅವರು ನನ್ನ ಕುಟುಂಬವನ್ನು ಈ ವಿಷಯದ ಬಗ್ಗೆ ಮನವೊಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು ಮತ್ತು ಅದೇ ರೀತಿಯಲ್ಲಿ ಅವರ ಮನವೊಲಿಸಿದ್ದಾರೆ. ಇದನ್ನೆಲ್ಲಾ ನೋಡಿದಾಗ ನನಗೆ ತುಂಬಾನೇ ಸಂತೋಷವಾಯಿತು ಎಂದು ವಧು ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿಯೊಂದು ಆಚರಣೆ ಮತ್ತು ಸಮಾರಂಭವನ್ನು ಕುದುರೆಯಿಲ್ಲದೆ ನಡೆಸಲಾಯಿತು ಎಂದು ಸಹ ಶೀರ್ಷಿಕೆಯಲ್ಲಿ ಹೇಳಿದ್ದಾ
ವಿಡಿಯೋ ನೋಡಿದ ನ್ನೆತ್ತಿಗಾರು ಹೇಳಿದ್ದೇನು
ಒಟ್ಟಿನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಈ ವರನ ನಡೆಯನ್ನು ತುಂಬಾನೇ ಶ್ಲಾಘಿಸಿದರು. "ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ವಿಡಿಯೋ ನೋಡಿದ ಮೇಲೆ ಕಾಮೆಂಟ್ ಮಾಡಿದ್ದಾರೆ. "ನನ್ನ ಪತಿ ಕೂಡ ಬಾರಾತ್ ನಲ್ಲಿ ಕುದುರೆಯ ಮೇಲೆ ಬರಲು ನಿರಾಕರಿಸಿದರು... ಅವರು ಕಾರಿನಲ್ಲಿ ಬಂದರು" ಎಂದು ಮಹಿಳೆಯೊಬ್ಬರು ತಮ್ಮ ಮದುವೆಯ ಕ್ಷಣವನ್ನು ನೆನಪು ಮಾಡಿಕೊಂಡು ಹೇಳಿದರು. ಇನ್ನೊಬ್ಬ ಬಳಕೆದಾರರು "ಇದು ನಿಜಕ್ಕೂ ಅದ್ಭುತ. ಇದನ್ನು ನೋಡಲು ತುಂಬಾ ಸಂತೋಷವಾಗಿದೆ" ಎಂದು ಹೇಳಿದರು. ನೋಡಿ ರೆ.ರುಯೋ ಡಿ. ಡಿ..ಷವಾಗಿದೆ" ಎಂದು ಹೇಳಿದರು.

Post a Comment