ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಕಾಯಿದೆ (National Education Act) ಅಡಿಯಲ್ಲಿ ರಾಜ್ಯದಲ್ಲಿ ಭಾಷಾ ಶಿಕ್ಷಣದ (Language Education) ಕುರಿತು ಕರ್ನಾಟಕದ ಕರಡು ಪ್ರತಿಯು 1 ರಿಂದ 12 ನೇ ತರಗತಿಯವರೆಗೆ ಕನ್ನಡವನ್ನು ಒಂದು ಕಡ್ಡಾಯ ಭಾಷೆಯನ್ನಾಗಿ ಹೊಂದಿರುವ ತ್ರಿಭಾಷಾ ನೀತಿಯನ್ನು ಪ್ರಸ್ತಾಪಿಸುತ್ತದೆ. ಈ ಕರಡು ಪ್ರತಿಯ ಪ್ರಕಾರ, 5 ನೇ ತರಗತಿಯವರೆಗಿನ ಬೋಧನಾ ಮಾಧ್ಯಮವು ಮಾತೃಭಾಷೆ (Mother Tongue) ಅಥವಾ ಮನೆ ಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ಕನ್ನಡವಾಗಿರಬೇಕು ಎಂದು ಪ್ರತಿಯು ಕಡ್ಡಾಯಗೊಳಿಸಿದ್ದರೂ ಇದು ದ್ವಿಭಾಷಾ ಮಾಧ್ಯಮದ ಬೋಧನೆಗೂ ಸಹ ಸಮ್ಮತಿಯನ್ನು ನೀಡುತ್ತದೆ. ಇದರಿಂದ ಮಕ್ಕಳಿಗೆ (Children) ಅಕ್ಷರ ಜ್ಞಾನದ ಬುನಾದಿ ಭದ್ರವಾಗುತ್ತದೆ.
ಯಾವ ಮಕ್ಕಳ ಮಾತೃಭಾಷೆ ಆಂಗ್ಲ ಭಾಷೆಯಾಗಿರುತ್ತದೆಯೋ ಅಥವಾ ಬೇರೆ ರಾಜ್ಯಗಳಿಂದ ಬಂದ ಯಾವ ಮಕ್ಕಳಿಗೆ ಸ್ಥಳೀಯ ಭಾಷೆಯ ಬಗ್ಗೆ ಜ್ಞಾನವಿರುವುದಿಲ್ಲವೋ, ಅಂತಹ ಮಕ್ಕಳು ಆಂಗ್ಲ ಭಾಷೆ ಜೊತೆ ಆ ರಾಜ್ಯದ ಮಾತೃ ಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ಕನ್ನಡವನ್ನು ಅವರಿಗೆ ಕಲಿಸಬಹುದು ಎಂದು ಈ ಕರಡು ಪ್ರತಿಯಲ್ಲಿ ಹೇಳಲಾಗಿ
ದ್ವಿಭಾಷಾ ಮಾಧ್ಯಮದ ಕಲಿಕೆಯ ಅವಶ್ಯಕತೆ
ಇತರ ತರಗಳಿಗೆ, ಬೋಧನಾ ಮಾಧ್ಯಮವು ದ್ವಿಭಾಷಾವಾಗಿರಬೇಕು. ಶಿಕ್ಷಕರು ಮಾತೃಭಾಷೆ ಅಥವಾ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಬಳಸಬೇಕು. ಮಕ್ಕಳು ಯಾವುದೇ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವರಿಗೆ ಮುಕ್ತ ಅವಕಾಶ ನೀಡಬಹುದು. ಇದು CBSE, ICSE ಮತ್ತು ಅಂತರಾಷ್ಟ್ರೀಯ ಶಾಲೆಗಳನ್ನು ಒಳಗೊಂಡಂತೆ ಎಲ್ಲಾ ಶಿಕ್ಷಣ ಬೋರ್ಡ್‌ಗಳಿಗೂ ಅನ್ವಯಿಸುತ್ತದೆ. ಎಲ್ಲರಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮತ್ತು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ ಕ್ರಮವನ್ನು ಅಳವಡಿಸಲು ದ್ವಿಭಾಷಾ ಮಾಧ್ಯಮವನ್ನು ಶಿಫಾರಸು ಮಾಡಲಾಗಿದೆ
ಇದನ್ನೂ ಓದಿ: Trans Pilot: ಭಾರತದ ಮೊದಲ ಟ್ರಾನ್ಸ್ ಪೈಲಟ್ ಈಗೇನು ಮಾಡ್ತಿದ್ದಾ
“ಬೇರೆ ರಾಜ್ಯದಿಂದ ಬಂದ ಪೋಷಕರು ಆಂಗ್ಲ ಭಾಷೆಯನ್ನೆ ಆಯ್ಕೆ ಮಾಡಿಕೊಳ್ಳಲು ಇಚ್ಛಿಸಿದರೆ, ಅದು ಅವರ ಸಾಂವಿಧಾನಿಕ ಹಕ್ಕು ಆಗಿರುವುದರಿಂದ ಅಂತಹವರಿಗೆ ಅವಕಾಶ ಮಾಡಿಕೊಡಬಹುದು. ಆಂಗ್ಲ ಭಾಷೆಯೇ ಮಕ್ಕಳ ಮಾತೃಭಾಷೆಯಾಗಿದ್ದರೆ ಅಂತಹವರು ತಮ್ಮ ಶಿಕ್ಷಣವನ್ನು ಆಂಗ್ಲ ಭಾಷೆಯಲ್ಲಿಯೇ ಮುಂದುವರಿಸಲಿ. ಆದರೆ ಅಂತಹ ತರಗತಿಗಳನ್ನು ಹೊರತು ಪಡಿಸಿ ಎಲ್ಲ ಮಕ್ಕಳಿಗೂ ಶಿಕ್ಷಣದ ಬುನಾದಿಯಲ್ಲಿಯೇ ಕನ್ನಡ ಮತ್ತು ಆಂಗ್ಲ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿದರೆ ಮಕ್ಕಳು ಎರಡು ಭಾಷೆಗಳಲ್ಲಿ ಪರಿಣಿತಿಗೊಳ್ಳುತ್ತಾ
ರಾಷ್ಟ್ರೀಯ ಶಿಕ್ಷಣ ಕಾಯಿದೆ ಪ್ರಕಾರ ಏನಿ
ಈ ರಾಷ್ಟ್ರೀಯ ಶಿಕ್ಷಣ ಕಾಯಿದೆ(NEP) ಪ್ರಕಾರ ಪ್ರತಿ ರಾಜ್ಯಗಳು ೨೬ ವಿವಿಧ ಮುಖ್ಯಾಂಶಗಳನ್ನು ಒಳಗೊಂಡ ಒಂದು ಕರಡು ಪ್ರತಿ ಸಿದ್ಧಗೊಳಿಸಬೇಕೆಂಬ ನೀತಿಯನ್ನು ಜಾರಿಗೊಳಿಸುತ್ತಿದೆ. ಇದರ ನಂತರ ಈ ಕರಡು ಪ್ರತಿಗಳನ್ನು NCERT ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಈ ಕರಡು ಪ್ರತಿಗಳನ್ನು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಸಂಸ್ಥೆಗೆ ತಯಾರಿಸುವಂತೆ ಶಿಫಾರಸು ಮಾಡಿದೆ. ರಾಜ್ಯದ ಕರಡು ಪ್ರತಿಯು ರಾಜ್ಯದ ಅಭಿಪ್ರಾಯವನ್ನು ಪ್ರತಿನಿಧಿಸುತ್ತದೆ ಮತ್ತು ಅದೇ ವಿಷಯವನ್ನು ಬಳಸಬಹುದು. ಅದಕ್ಕಾಗಿ ಅದೇ ಕಾಯಿದೆ ಪ್ರಕಾರ ರಾಜ್ಯದ ಪಠ್ಯಕ್ರಮವನ್ನೂ ಸಿದ್ಧಪಡಿಸುತ್ತಿದೆ
ಇದನ್ನೂ ಓದಿ: Vijayapura News: ವಿಜಯಪುರದಲ್ಲಿ ಬಿಸಿಯೂಟ ಸ್ಥಗಿತ? ಗೊಂದಲ ಬೇಡ, ಇಲ್ಲಿದೆ ಅಧಿಕೃತ ಮಾಹಿ
ಈ ಕರಡು ಪ್ರತಿಯಲ್ಲಿ ಮಕ್ಕಳಿಗೆ ಕಲಿಸಬೇಕಾದ ಮೂರು ಭಾಷೆಗಳಲ್ಲಿ ಯಾವುದೇ ಕ್ರಮಾನುಗತ ಇರುವುದಿಲ್ಲ ಎಂದು ಈ ಪ್ರತಿಯು ಸ್ಪಷ್ಟಪಡಿಸುತ್ತದೆ. ಇದು ಶಾಲಾಮಕ್ಕಳ ಪ್ರಾಥಮಿಕ ಹಂತದಲ್ಲಿ (3 ವರ್ಷಗಳ ಪೂರ್ವ ಪ್ರಾಥಮಿಕ), ಕನ್ನಡವನ್ನು 1 ನೇ ಭಾಷೆ ಎಂದು ಕಲಿಸಲಾಗುತ್ತದೆ. ಮಾತೃಭಾಷೆ/ಮನೆ ಭಾಷೆ (ಕನ್ನಡವಲ್ಲದಿದ್ದರೆ) ಕನ್ನಡವನ್ನು 2 ನೇ ಭಾಷೆ ಎಂದು ಕಲಿಸಲಾಗುತ್ತದೆ ಮತ್ತು ಸ್ಥಳೀಯ ಭಾಷೆ (ಕನ್ನಡವಲ್ಲದಿದ್ದರೆ) ಇಲ್ಲಿ ಕನ್ನಡವನ್ನು 3 ನೇ ಭಾಷೆ ಎಂದು ಕಲಿಸಿಕೊಡಲಾಗುತ್ತದೆ. ತಿ.ದೆ ರೆ.ರೆ?.ದೆ.ಲಿಸಿಕೊಡಲಾಗುತ್ತದೆ.

Post a Comment