ಮುಸ್ಲಿಂರ ತ್ಯಾಗ ಮತ್ತು ಬಲಿದಾನದ ಹಬ್ಬವೆಂದೇ ಕರೆಯಲಾಗುವ ಬಕ್ರೀದ್ ಹಬ್ಬ (Bakrid festival) ಕರ್ನಾಟಕದ ಮುಸ್ಲಿಮರಿಗೆ (Karnataka Muslims) ಈ ಬಾರಿ ದುಬಾರಿಯಾಗಿತ್ತು. ಕುರಿ, ಮೇಕೆಗಳ ಬೆಲೆ ದುಬಾರಿಯಾಗುವುದರ ಜೊತೆ ಕೆಲವು ಕಾನೂನಿನ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಅಕ್ರಮವಾಗಿ ಕುರಿ ಮತ್ತು ಮೇಕೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ರಾಜ್ಯ ಸರ್ಕಾರವು 'ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ರ ಅನುಗಣವಾಗಿ ಆದೇಶ ಹೊರಡಿಸಿದೆ. ಇದರ ಪರಿಣಾಮ ಹಬ್ಬಕ್ಕೆ ಮುಂಚಿತವಾಗಿ ಕುರಿ ಮತ್ತು ಮೇಕೆಗಳ ಬೆಲೆ ಗಗನಕ್ಕೇರಿದ್ದವು. (Price hike).
ಹೀಗಾಗಿ ಅನೇಕ ಮಧ್ಯಮ ವರ್ಗದ ಮುಸ್ಲಿಂ ಬಾಂಧವರು ಕುರಿ, ಮೇಕೆ ಕೈಗೆಟಕುವ ದರಕ್ಕಿಂತ ಹೆಚ್ಚಿದ್ದು, ಹಬ್ಬದಂದು ಇವುಗಳ ಬಲಿಯನ್ನು ಕೈಬಿಟ್ಟಿದ್ದಾರೆ ಎನ್ನಲಾಗಿ
ಜಾನುವಾರು ಹತ್ಯೆ ನಿಷೇಧ
ಕಳೆದ ವರ್ಷ ಜನವರಿಯಲ್ಲಿ ಜಾರಿಗೆ ಬಂದ ಈ ಕಾಯಿದೆಯು ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರುತ್ತದೆ. ಇದರನ್ವಯ ಗೋ ಸಾಗಣೆ ಅಥವಾ ಅಕ್ರಮವಾಗಿ ಜಾನುವಾರುಗಳನ್ನು ಕಟ್ಟಿಹಾಕುವುದನ್ನು ನಿಷೇಧಿಸಿದೆ. ಮತ್ತು ಎಲ್ಲಾ ವಯಸ್ಸಿನ ಆಕಳು, ಆಕಳ ಕರು, ಎತ್ತು, ಗೂಳಿ, ಎಮ್ಮೆ ಅಥವಾ ಕೋಣಗಳ ಹತ್ಯೆಯನ್ನು ನಿಷೇಧಿಸಿದೆ
ಲಾಕ್‌ಡೌನ್ ಮತ್ತು ಇತರ ದೃಷ್ಟಿಯಿಂದ ಹೊಸ ಕಾನೂನು ಕಳೆದ ವರ್ಷ ಜಾರಿಯಲ್ಲಿರಲಿಲ್ಲ. ಆದರೆ ಈ ವರ್ಷ ಕಾನೂನುನನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗಿದೆ. 2022ರ ಶಾಸನವನ್ನು ಉಲ್ಲೇಖಿಸಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಜಾನುವಾರು ಹತ್ಯೆ ಮಾಡುವುದನ್ನು ತಡೆಯುವಂತೆ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ. ಮತ್ತು ಕಾನೂನು ಉಲ್ಲಂಘಿಸುವವರ ಮೇಲೆ ಶಿಸ್ತುಕ್ರಮಕ್ಕೆ ಆದೇಶಿಸಿದ್ದಾ
ಕುರಿ ಮತ್ತು ಮೇಕೆಗಳ ಬೆಲೆ ದುಬಾ
ಬುಧವಾರ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸುತ್ತೋಲೆ ಹೊರಡಿಸಿ 2020ರ ಕಾನೂನಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಪ್ರಾಣಿ ಬಲಿಯನ್ನು ನಿಷೇಧಿಸಿದೆ. ಮತ್ತು ಶಿಕ್ಷೆಯನ್ನು ತಪ್ಪಿಸಲು ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಸಮುದಾಯದ ಮುಖಂಡರು ಮತ್ತು ಮುಸ್ಲಿಮರನ್ನು ಒತ್ತಾಯಿಸಿದೆ. ಈ ಎಲ್ಲಾ ಕಾನೂನು ಕ್ರಮಗಳಿಂದಾಗಿ ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆಗಳು ದುಬಾರಿಯಾಗಿವೆ
ಇದನ್ನೂ ಓದಿ: Savadatti Yallamma: ಸವದತ್ತಿಯಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ, ಯಲ್ಲಮ್ಮನ ಹುಂಡಿಯಲ್ಲಿ 2.15 ಕೋಟಿ ಕಾಣಿಕೆ ಸಂಗ್ರ
ಈ ಹಬ್ಬದ ಸಂಭ್ರಮದಲ್ಲಿ ಅನೇಕ ಮುಸ್ಲಿಮರು ಜಾನುವಾರುಗಳು ಅಗ್ಗವಾಗಿರುವುದರಿಂದ ಇವುಗಳನ್ನೇ ವಧೆ ಮಾಡಲು ಬಯಸುತ್ತಾರೆ. ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಏಳು ಜನರ ಹೆಸರಿನಲ್ಲಿ ಒಂದು ಪ್ರಾಣಿಯನ್ನು ಬಲಿ ನೀಡಬಹುದು. ಆದರೆ ಆಡುಗಳು ಮತ್ತು ಕುರಿಗಳನ್ನು ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲಿ ಬಲಿ ನೀಡಬಹು
ಮುಸ್ಲಿಂ ಸಮುದಾಯ ಹೆಚ್ಚಿರುವ ಬೆಂಗಳೂರಿನ ಶಿವಾಜಿನಗರದಲ್ಲಿ ಈವರೆಗೂ ಒಂದೇ ಒಂದು ಗೋವನ್ನು ವಧೆ ಮಾಡಲು ತಂದಿಲ್ಲ. ಆದರೆ ಆಡುಗಳು ಮತ್ತು ಕುರಿಗಳು ಲಭ್ಯವಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾ
ಮಾರಾಟದಲ್ಲಿ 50% ಇಳಿ
ಕಾಯಿದೆ ಜಾರಿಯಲ್ಲಿರುವುದರಿಂದ ಮಾರಾಟದಲ್ಲಿ 50% ಇಳಿಕೆ ಕಂಡಿದೆ. ಕಳೆದ ಭಾರಿ 600 ಕುರಿ ಮತ್ತು ಮೇಕೆಗಳನ್ನು ವ್ಯಾಪಾರ ಮಾಡಿದ್ದೆವು ಆದರೆ ಈ ವರ್ಷ ಈ ಸಂಖ್ಯೆ 300ಕ್ಕೆ ಇಳಿದಿದೆ ಎಂದು ವ್ಯಾಪಾರಿಗಳಾದ ಯಾಸೀನ್ ಮತ್ತು ಅಕಿಬ್ ಹೇಳಿದ್ದಾರೆ
ಪ್ರತಿಕೂಲ ಹವಾಮಾನವು ಸಹ ಬೇಡಿಕೆಯನ್ನು ಕುಂಠಿತಗೊಳಿಸಿದೆ. ಏಕೆಂದರೆ ಕುರಿಗಳು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಆದ್ದರಿಂದ
ಅವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಶಿವಾಜಿನಗರ ನಿವಾಸಿಗಳು
ಹಬ್ಬದ ಸಂಭ್ರಮದ ಜೊತೆ ಬಿಸಿ ತಟ್ಟಿದ ಬೆಲೆ ಏರಿ
ಉತ್ಕೃಷ್ಟ ರುಚಿ, ಕೊಬ್ಬಿನಂಶಕ್ಕೆ ಹೆಸರಾದ ಬನ್ನೂರು ತಳಿಯ ಕುರಿಗಳು ಒಂದು ಜೋಡಿಗೆ 75,000 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಈ ಬೆಲೆ 50,000 ರೂ.ಗಿಂತ ಹೆಚ್ಚಿರಲಿಲ್ಲ ಎಂದಿದ್ದಾರೆ ವ್ಯಾಪಾರಿಗಳು. ಅದೇ ರೀತಿ ಅಮಂಗಡ್ ಮೇಕೆ
2021ರಲ್ಲಿ 25,000 ರೂ. ಇದ್ದದ್ದು, ಈ ವರ್ಷ 35,000 ರೂ.ಗೆ ಬೆಲೆಯಲ್ಲಿ ಏರಿಕೆ ಆಗಿದೆ. ಕಳೆದ ವರ್ಷಕ್ಕಿಂತ ಕುರಿ, ಮೇಕೆಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇವುಗಳಲ್ಲಿ ಗ್ರಾಹಕರಿಗೆ ಅಗ್ಗವಾಗಿ ಸಿಗುವುದೆಂದರೆ ಚೆನ್ನೂರಿನ ಕುರಿಗಳು ಎಂದಿದ್ದಾರೆ ನುರಿತ ವ್ಯಾಪಾರಿಗಳು
ಇದನ್ನೂ ಓದಿ: Eidgah Maidan: ನನ್ನ ಪ್ರಾಣ ಇರೋವರೆಗೂ ಈದ್ಗಾ ಮೈದಾನ ತೆಗೆಯಲು ಸಾಧ್ಯವೇ ಇಲ್ಲ - ಜಮೀರ್ ಅಹ್ಮ
ಉರ್ದುವಿನಲ್ಲಿ ಬಕ್ರಿ ಎಂದು ಕರೆಯಲಾಗುವ ಮೇಕೆಯನ್ನು ಈ ಹಬ್ಬದ ದಿನ ತ್ಯಾಗ ಮಾಡಲಾಗುತ್ತದೆ. ಆದರೆ ಈ ವರ್ಷ ಮುಸ್ಲಿಂ ಸಮುದಾಯಕ್ಕೆ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ಬಿಸಿ ತಗುಲಿದೆ. ದ್.ಕೆ .ಜನರು.ಕೆರೆ.ದು.ಹ.ರಿ ರೆ.. ದೆ.ಭ್ರಮದ ಜೊತೆ ಬೆಲೆ ಏರಿಕೆ ಬಿಸಿ ತಗುಲಿದೆ.

Post a Comment