J Manjunath: ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾಥ್ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಆರೋಪಿಯನ್ನು ಎಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದು , ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.


 ಬೆಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ (Bribe) ಪಡೆದ ಪ್ರಕರಣದಲ್ಲಿ ಬೆಂಗಳೂರು ನಗರದ ಮಾಜಿ ಡಿಸಿ ಮಂಜುನಾಥ್ (IAS Officer Manjunath) ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಳಪಡಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ (Parappana Agrahara Jail) ಐಎಎಸ್ ಅಧಿಕಾರಿ ಕ್ವಾರಂಟೈನ್ ಸೆಲ್ (Quarantine Cell) ನಲ್ಲಿ ಸಾಮಾನ್ಯ ವಿಚಾರಣಾಧೀನಯಂತೆ ದಿನ ಕಳೆದಿದ್ದಾರೆ. ಹೌದು ಎಸಿಬಿ ಅಧಿಕಾರಿಗಳಿಂದ  (ACB Officers) ಬಂಧಿತರಾಗಿರುವ ಐಎಎಸ್ ಅಧಿಕಾರಿ ಜೆ.ಮಂಜುನಾಥ್ಗೆ 14 ದಿನ‌ಗಳ ನ್ಯಾಯಾಂಗ ಬಂಧನ ವಿಧಿಸಿ ಸಿಸಿಎಚ್ 24 ರ ವಿಶೇಷ ಎಸಿಬಿ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಿ ನಾರಾಯಣ ಭಟ್ ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶದನ್ವಯ ಅಧಿಕಾರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರಾತ್ರಿ ಒಪ್ಪಿಸಲಾಗಿದೆ . ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕ್ವಾರಂಟೈನ್ ಸೆಲ್ ನಲ್ಲಿ ಕಾಲ ಕಳೆದ ಮಂಜುನಾಥ್ ತಡರಾತ್ರಿವರೆಗು ನಿದ್ರಿಸಿರಲಿಲ್ಲ

ಹೆಚ್ಚು ಮಾತನಾಡದ ಮಂಜುನಾ

ಸಾಮಾನ್ಯವಾಗಿ ವಿಚಾರಣಾಧೀನ ಖೈದಿಗಳಿಗೆ ನೀಡಲಾಗುವ ಚಾಪೆ ಮತ್ತು ಬೆಡ್ ಶೀಟ್ ಹೊದ್ದು ನಿದ್ರಿಸಿದ ಮಂಜುನಾಥ್ ಮುಂಜಾನೆ ಆರು ಗಂಟೆ ಸುಮಾರಿಗೆ ನಿತ್ಯ ಕರ್ಮ ಮುಗಿಸಿದ್ದಾರೆ. ಎಂದಿನಂತೆ ಇತರೆ ಖೈದಿಗಳಿಗೆ ನೀಡುವ ಚಿತ್ರಾನ್ನ ಸವಿದ  ಮಂಜುನಾಥ್ ಸಿಬ್ಬಂದಿ ಜೊತೆ ಹೆಚ್ಚು ಮಾತನಾಡಲಿಲ್ಲ ಎನ್ನಲಾಗಿ

ಇದನ್ನೂ ಓದಿ:  Karnataka Weather Report: ರಾಜ್ಯದಲ್ಲಿ ಇನ್ನೈದು ದಿನ ಮಳೆ; ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋ

5 ಲಕ್ಷ ಸ್ವೀಕರಿಸುತ್ತಿದ್ದ ಆ

ಇನ್ನೂ ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿನ ವ್ಯಾಜ್ಯದಲ್ಲಿ ಆಜಂ ಪಾಶಾ ಎಂಬುವವರ ಪರವಾಗಿ ಆದೇಶ ನೀಡಲು 5 ಲಕ್ಷ ರೂಪಾಯಿ ಲಂಚ ಪಡೆದ ಗಂಭೀರ ಆರೋಪ ಮಂಜುನಾಥ್ ಮೇಲಿದ್ದು, ಮೇ 21ರಂದು ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು 5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್‌ನನ್ನು ಬಂಧಿಸಿದ್ದರು

ಜೆ ಮಂಜುನಾ

ಬಂಧಿತರ ವಿಚಾರಣೆಯಲ್ಲಿ ಆಗ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಪಾತ್ರ ಕಂಡುಬಂದ ಕಾರಣ ಬಂಧಿಸಲಾಗಿದೆ. ತಡರಾತ್ರಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಆರೋಪಿಯನ್ನು ಎಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದು , ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾ

ವಿಚಾರಣಾಧಿನ ಖೈದಿ ನಂಬರ್ 6

ಜೈಲಿನ ದಾಖಲಾತಿ ವಿದಿವಿದಾನಗಳನ್ನು ಪೂರೈಸುವುದು ತಡವಾದ ಹಿನ್ನೆಲೆ ಮಾರನೇ ದಿನ ಬೆಳಗ್ಗೆ ವಿಚಾರಣಾಧಿನ ಖೈದಿ ನಂಬರ್ 6773 ನೀಡಿದ್ದು , ಸದ್ಯ ಕ್ವಾರಂಟೈನ್ ಕೊಠಡಿಯಲ್ಲಿ ಸಾಮಾನ್ಯ ವಿಚಾರಣಾದೀನ ಖೈದಿಯಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾ

ಕೇಂದ್ರ ಕಾರಾಗೃಹ ಬೆಂಗಳೂರು

ಜಾಮೀನಿಗಾಗಿ ಕಾದು ಕುಳಿತ ಮಂಜು

ಒಟ್ನಲ್ಲಿ ಈ ಹಿಂದೆ ಸಹ ಭ್ರಷ್ಟಚಾರ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಜೈಲು ಸೇರಿದ ಇತಿಹಾಸವಿದ್ದು , ಇದೀಗ ಐಎಎಸ್ ಅಧಿಕಾರಿ ಜೆ ಮಂಜುನಾಥ್ ಸಹ ಸೇರ್ಪಡೆಯಾಗಿದ್ದಾರೆ , ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಜಿಲ್ಲಾಧಿಕಾರಿ ಸಾಮಾನ್ಯ ವಿಚಾರಣಾಧೀನ ಖೈದಿಯಂತೆ ದಿನ ದೂಡುತ್ತಿದ್ದು, ಜಾಮೀನಿಗಾಗಿ ಕಾದು ಕುಳಿತ್ತಿದ್ದಾ

ಇದನ್ನೂ ಓದಿ:  Trans Pilot: ಫುಡ್ ಡೆಲಿವರಿ ಕೆಲಸ ಮಾಡ್ತಿರೋ ದೇಶದ ಮೊದಲ ತೃತೀಯಲಿಂಗಿ ಪೈಲಟ್! ಕನಸಿನ ಜಾಬ್ ಏನಾಯ್ತು

5 ಲಕ್ಷ ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದ ಜಿಲ್ಲಾಧಿ

ಕಳೆದ ಮೇ 21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ ಮಹೇಶ್ ಎಂಬುವರು ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆದು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿ ಬಂದಿತ್ತುಕೇಂದ್ರ ಕಾರಾಗೃಹ ಬೆಂಗ

ಹೀಗಾಗಿ ಎಸಿಬಿ‌ ತನಿಖಾಧಿಕಾರಿಗಳು ಡಿಸಿ ವಿಚಾರಣೆ‌ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಪಾತ್ರವಿರಬಹುದೆಂದು ಸಂಶಯ ವ್ಯಕ್ತಪಡಿಸಿದ ಹೈಕೋರ್ಟ್, ಭೂ ವ್ಯಾಜ್ಯ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನೂ ಆರೋಪಿಯನ್ನಾಗಿ ಸೇರಿಸುವಂತೆ ಆದೇಶಿಸಿತ್ತು. ಜಿಲ್ಲಾಧಿಕಾರಿಗಳ ಪಾತ್ರದ ಬಗ್ಗೆ ಸರಿಯಾಗಿ ತನಿಖೆ ನಡೆಸಿದ ಎಸಿಬಿಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಳೂರು.ಕಾರಿ?ರೆ.ನಾಥ್ರೆ.773ರೆ.ಥ್.ರೋಪಷಣೆದೆ.ಥ್.ರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

Post a Comment

Previous Post Next Post