ಕಗ್ಗೊಲೆಯಾದ ಬಡ ಯುವಕರ ಆತ್ಮಘೋಷದ ಶಾಪ ಬಿಜೆಪಿಗೆ ತಟ್ಟದೆ ಇರದು. ಕರ್ನಾಟಕವನ್ನು ʼಕಗ್ಗೊಲೆಗಳ ಕರ್ನಾಟಕʼವನ್ನಾಗಿ ಮಾಡಿದ ಕುಖ್ಯಾತಿ ಈ ಪಕ್ಷದ್ದೇ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು (ಜು.30): ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ (Resignation) ಬಗ್ಗೆ ಕೆ.ಎಸ್.ಈಶ್ವರಪ್ಪ ಹೇಳಿಕೆ ಕುರಿತು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (H D Kumarswamy) ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಕಾರ್ಯಕರ್ತರನ್ನು 'ಮತೀಯ ವ್ಯಸನಿ'ಗಳನ್ನಾಗಿ ಮಾಡಿ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ (BJP) ಅಸಲಿ ಮುಖವನ್ನು ಮಾಜಿ ಸಚಿವ ಕೆಎಸ್.ಈಶ್ವರಪ್ಪ ಕಳಬಿಚ್ಚಿಟ್ಟಿದ್ದಾರೆ. ಇದು ಅತ್ಯಂತ ಹೇಯ ಮತ್ತು ಪಾತಕ, ರಾಕ್ಷಸೀ ರಾಜಕಾರಣದ ಪರಾಕಾಷ್ಠೆ. ಕಂಡೋರ ಮಕ್ಕಳ ಕಗ್ಗೊಲೆ, ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಸಹಪಾಠಿಯ ಕೊಲೆಗೆ (Murder) ಪ್ರತಿಯಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರೆ, ಅವರ ಆತ್ಮಸ್ಥೈರ್ಯವನ್ನೇ ಅಣಕಿಸುವ, ಅವರ ನೈತಿಕತೆಯನ್ನೇ ಶಂಕಿಸುವ ಈಶ್ವರಪ್ಪನವರು (Eshwarappa) ಬಿಜೆಪಿಯ ನೈಜ ಮುಖವಾಡ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ
ಈಶ್ವರಪ್ಪ ವಿರುದ್ಧ ಟ್ವೀಟ್ ಮೂಲಕ ಕಿ
ಕಾರ್ಯಕರ್ತರನ್ನು 'ಮತೀಯ ವ್ಯಸನಿ'ಗಳನ್ನಾಗಿ ಮಾಡಿ ಬೇಳೆ ಬೇಯಿಸಿಕೊಳ್ಳುವ @BJP4Karnataka ಅಸಲಿ ಮುಖವನ್ನು ಮಾಜಿ ಸಚಿವ @ikseshwarappa ಕಳಚಿಟ್ಟಿದ್ದಾರೆ. ಇದು ಅತ್ಯಂತ ಹೇಯ ಮತ್ತು ಪಾತಕ, ರಾಕ್ಷಸೀ ರಾಜಕಾರಣದ ಪರಾಕಾಷ್ಠೆ. 1/7 pic.twitter.com/1wP5WEh
— H D Kumaraswamy (@hd_kumaraswamy) July 30, 2
ಕೊಲೆಗೆಡುಕ ರಾಜಕಾರಣಕ್ಕೆ ಈಶ್ವರಪ್ಪನವರೇ ಪರಾಕಾಷ್ಠೆ
ಬಾವುಟ ಕಟ್ಟಲು, ಕರಪತ್ರ ಹಂಚಲು, ಮತ ಕೇಳಲು, ಟೆಂಟ್ ಹಾಕಲು, ಗೆದ್ದವರನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಲು ಇದೇ ಯುವಕರು ಬೇಕು. ಇಂಥ ಯುವಕರಿಗೆ ನಾಯಕರಾದವರೇ ಧರ್ಮದ ಅಪೀಮಿನ ಅಮಲೇರಿಸಿ, ಅವರ ಜೀವಕ್ಕೆ ಸಂಚಕಾರ ತಂದು, ಅವರ ಕುಟುಂಬಗಳನ್ನು ಬೀದಿಪಾಲು ಮಾಡುವ ಕಿರಾತಕ, ಕೊಲೆಗೆಡುಕ ರಾಜಕಾರಣಕ್ಕೆ ಈಶ್ವರಪ್ಪನವರೇ ಪರಾಕಾಷ್ಠೆ ಎಂದು ಕಿಡಿಕಾರಿದ್ರು
ಇದನ್ನೂ ಓದಿ: Siddaramaiah: ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಭೇಟಿಯಾದ ಸಿದ್ದ
ಕಂಡೋರ ಮಕ್ಕಳ ಕಗ್ಗೊಲೆ, ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಸಹಪಾಠಿಯ ಕೊಲೆಗೆ ಪ್ರತಿಯಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರೆ, ಅವರ ಆತ್ಮಸ್ಥೈರ್ಯವನ್ನೇ ಅಣಕಿಸುವ, ಅವರ ನೈತಿಕತೆಯನ್ನೇ ಶಂಕಿಸುವ ಈಶ್ವರಪ್ಪನವರು ಬಿಜೆಪಿಯ ನೈಜ ಮುಖವಾಡ.
— H D Kumaraswamy (@hd_kumaraswamy) July 30, 2
ರಾಜೀನಾಮೆ ಒಪ್ಪಿದರೆ ನಿಮ್ಮ ಗತಿ ಏನು
ರಾಜೀನಾಮೆ ಒಪ್ಪಿದರೆ ನಿಮ್ಮ ಗತಿ ಏನು? ನಿಮ್ಮ ಜಾಗಕ್ಕೆ ಹೊಸಬರು ಬರುತ್ತಾರೆ! ಬಿಜೆಪಿಗೆ ಕಾರ್ಯಕರ್ತರು ಸಿಗುವುದಿಲ್ಲವೇ? ಯುವಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಏನು?" ಎಂದು ಪ್ರಶ್ನಿಸಿರುವ ಈಶ್ವರಪ್ಪ, ಸಭ್ಯ ರಾಜಕಾರಣದ ಎಲ್ಲೆ ಮೀರಿ ಅಹಂಕಾರ ಪ್ರದರ್ಶಿಸಿದ್ದಾರೆ
ಬಿಜೆಪಿಯ ರಕ್ಕಸ ಮುಖ ಅನಾ
@BJP4Indiaಎತ್ತ ಸಾಗುತ್ತಿದೆ ಎನ್ನುವುದಕ್ಕೆ ಈಶ್ವರಪ್ಪ ಹೇಳಿಕೆಯೇ ಸಾಕ್ಷಿ. ನೆತ್ತರಿನ ಸುಪ್ಪತ್ತಿಗೆಯ ಮೇಲೆ ಮೆರೆಯುತ್ತಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಕೊಲೆ ಸಂದರ್ಭದಲ್ಲಿ ವರ್ತಿಸಿದ ರೀತಿ ಎಲ್ಲರೂ ಬಲ್ಲರು. ಇವರು ಬಿಜೆಪಿಯ ರಕ್ಕಸ ಮುಖವನ್ನು ಅನಾವರಣ ಮಾಡಿದ್ದಾರೆ
ಆತ್ಮಘೋಷದ ಶಾಪ ಬಿಜೆಪಿಗೆ ತಟ್ಟದೆ
ಕಗ್ಗೊಲೆಯಾದ ಬಡ ಯುವಕರ ಆತ್ಮಘೋಷದ ಶಾಪ ಬಿಜೆಪಿಗೆ ತಟ್ಟದೆ ಇರದು. ಕರ್ನಾಟಕವನ್ನು ʼಕಗ್ಗೊಲೆಗಳ ಕರ್ನಾಟಕʼವನ್ನಾಗಿ ಮಾಡಿದ ಕುಖ್ಯಾತಿ ಈ ಪಕ್ಷದ್ದೇ. ಕಮಲದ ರೆಕ್ಕೆಗಳಿಗೆ ಅಂಟಿಕೊಂಡಿರುವ ರಕ್ತದ ಕಲೆಗಳು, ನಿಮ್ಮ ಪಾಪದ ಕೊಡವನ್ನು ತುಂಬಿಸುತ್ತಿ
ಇದನ್ನೂ ಓದಿ: Siddaramaiah: ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎಂದವರನ್ನು ಯಾವ ದೇವರೂ ಕ್ಷಮಿಸಲಾರ -ಬಹಿರಂಗ ಪತ್ರದಲ್ಲಿ ಸಿದ್ದರಾಮಯ್ಯ ಆಕ್ರೋ
ಬಿಜೆಪಿ ಕಾರ್ಯಕರ್ತರೇ.., ನೀವು ಸ್ವಾರ್ಥಿ ನಾಯಕರ ಗುಲಾಮರಲ್ಲ, ಇನ್ನಾದರೂ ಕೊಲೆಗೆಡುಕ ರಾಜಕೀಯ ಕರಾಳ ಮುಖವನ್ನು ಅರ್ಥ ಮಾಡಿಕೊಳ್ಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಶವೆ.ಇರದು.ವರಣ.?022 2/7ರಾಮಯ್ಯ.0225hkಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

Post a Comment