ರಾಜ್ಯದಲ್ಲಿ ಮತ್ತಿಬ್ಬರು ವ್ಯಕ್ತಿಗಳು ಉಗ್ರ ಸಂಘಟನೆ ಐಸಿಸ್ (ISIS) ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಅನುಮಾನದ ಮೇಲೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (NAI) ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) 30 ವರ್ಷದ ವ್ಯಕ್ತಿಯೊಬ್ಬನನ್ನು ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದಿದೆ ಅಂತ ಮೂಲಗಳು ತಿಳಿಸಿವೆ.
ಭಟ್ಕಳ, ಉತ್ತರ ಕನ್ನಡ: ಇತ್ತೀಚಿಗಷ್ಟೇ ಬೆಂಗಳೂರಲ್ಲಿ (Bengaluru) ಶಂಕಿತ ಉಗ್ರನೊಬ್ಬನನ್ನು (suspected terrorist) ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದರು. ಅದರ ವಿಚಾರಣೆ ನಡೆಯುತ್ತಿರುವಾಗಲೇ ಮತ್ತೊಂದು ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮತ್ತಿಬ್ಬರು ವ್ಯಕ್ತಿಗಳು ಉಗ್ರ ಸಂಘಟನೆ (terrorist organization) ಐಸಿಸ್ (ISIS) ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಅನುಮಾನದ ಮೇಲೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (NAI) ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) 30 ವರ್ಷದ ವ್ಯಕ್ತಿಯೊಬ್ಬನನ್ನು ಹಾಗೂ ಆತನ ಸಹೋದರನನ್ನು ವಶಕ್ಕೆ ಪಡೆದಿದೆ ಅಂತ ಮೂಲಗಳು ತಿಳಿಸಿವೆ.
ಭಟ್ಕಳದಲ್ಲಿ ನಡೆಯಿತಾ ಎನ್ಐಎ ದಾ
ಐಸಿಸ್ ಸೇರಿದಂತೆ ಕೆಲವು ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಮಾಹಿತಿ ತಿಳಿದು ಬಂದಿದೆ. ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಭಟ್ಕಳ ಮೂಲದ 30 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ ಅಂತ ಮೂಲಗಳು ತಿಳಿಸಿವೆ
ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದನಾ ಶಂಕಿತ ವ್ಯಕ್ತಿ
ಭಟ್ಕಳದಲ್ಲಿದ್ದ 30 ವರ್ಷದ ಈ ವ್ಯಕ್ತಿಯು ಐಸಿಸ್ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಐಸಿಸ್ ಬರಹಗಳನ್ನು ಭಾಷಾಂತರ ಮಾಡುತ್ತಿದ್ದ ಎಂಬ ಶಂಕೆಯ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಆತನನ್ನು ಗುಪ್ತ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿರುವ ಮಾಹಿತಿ ಲಭ್ಯವಾ
ಇದನ್ನೂ ಓದಿ: Surathkal murder: ಫಾಜಿಲ್ ಕೊಲೆ ಕೇಸ್; ಕಾರ್ ಮಾಲೀಕ ಪೊಲೀಸರ ವಶಕ್ಕೆ; ಸುಳ್ಳು ಸುದ್ದಿ ಹಬ್ಬಿಸಬೇಡಿ; ಕಮಿಷನರ್ ಮ
ಬಂಧಿತ ವ್ಯಕ್ತಿ ಯಾರು
ಭಟ್ಕಳ ಪಟ್ಟಣದ ನಿವಾಸಿ 30 ಅಬ್ದುಲ್ ಮುಕ್ತದೀರ್ ಎಂಬಾತನೇ ಬಂಧಿತ ಆರೋಪಿ. ಈತನ ಜೊತೆಗೆ ಈತನ ಸಹೋದರನನ್ನೂ ಕೂಡ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದ ಎನ್‌ಐಎ ತಂಡ, ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರು ಅವರ ಪತ್ನಿಯ ಮನೆಯಲ್ಲಿದ್ದಾಗಲೇ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾ
ಉಗ್ರರ ಭಾಷಣದ ವಿಡಿಯೋದಿಂದ ಪ್ರಭಾ
ಇತ್ತ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರ, ಅಸ್ಸಾಂ ಮೂಲದ ಅಖ್ತರ್ ಹುಸೇನ್ ವಿಚಾರಣೆ ಚುರುಕುಗೊಂಡಿದೆ. ಈತ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ, ವಾಟ್ಸಾಪ್ ಮುಖಾಂತರ ಗ್ರೂಪ್ ರಚಿಸಿ ಜಿಹಾದ್ ಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಈತ ಚಿಕ್ಕ ವಯಸ್ಸಿನಿಂದಲೇ ಉಗ್ರ ಸಂಘಟನೆಗಳ ಪ್ರಮುಖ ನಾಯಕರ ಭಾಷಣದ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಎನ್ನಲಾಗಿ
ಇದನ್ನೂ ಓದಿ: Kodagu: ಪ್ರವೀಣ್ ನೆಟ್ಟಾರು ಹತ್ಯೆಗೆ ಕೊಡಗಿನಲ್ಲಿ ನಿಲ್ಲದ ಆಕ್ರೋಶ; ಶನಿವಾರಸಂತೆಯಲ್ಲಿ ಪ್ರತಿಭ
ಅಪಘಾನಿನಕ್ಕೆ ಹೋಗಲು ರೆಡಿಯಾಗಿದ್ದ ಶಂ
ಅಖ್ತರ್ ಆನ್ ಲೈನ್ ಮೂಲಕ ಧಾರ್ಮಿಕ ಮುಖಂಡರ ಪ್ರವಚನ ಕೇಳುತ್ತಿದ್ದ. ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಅಂತ ಸದಾ ಕಿಡಿಕಾರುತ್ತಿದ್ದ. ತನ್ನ ಸಮುದಾಯದ ಅಮಾಯಕರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಧರ್ಮ ಯುದ್ಧದಲ್ಲಿ ಭಾಗಿಯಾಗುವಂತೆ ಯುವಕರಿಗೆ ಕರೆ ನೀಡುತ್ತಿದ್ದ. ಇದೇ ವರ್ಷ ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗುತ್ತಿದೆ. ಧರ್ಮದ ಉಳಿವಿಗಾಗಿ ಜಿಹಾದ್ ಯುದ್ಧ ಮಾಡಬೇಕು. ಈ ನಮ್ಮ ಸಮುದಾಯ ಶೋಷಣೆಯಾಗುವುದನ್ನು ತಪ್ಪಿಸಬೇಕೆಂದು ಗ್ರೂಪ್ ಸದಸ್ಯರಿಗೆ ಕರೆ ನೀಡುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಕಿತಟನೆದೆ.ವಿತರೆ.?ನವಿಗಿದೆ.?.ಳಿ? ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

Post a Comment