ಜೈಲಿನಲ್ಲಿದ್ದುಕೊಂಡು (Jail) ಕಳ್ಳತನ (Theft) ಮಾಡಿಸುತ್ತಿದ್ದ ಮನೆಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. ಜಾಮೀನು ಪಡೆಯಲು ವಕೀಲರಿಗೆ ಫೀಸ್ ನೀಡಬೇಕಿತ್ತು. ಆದ್ದರಿಂದ ಜೈಲಿನಲ್ಲಿಯೇ ಕುಳಿತು ಸಹಚರರಿಂದ ಕಳ್ಳತನ ಮಾಡಿಸಲು ಸಂಚು ರೂಪಿಸಿದ್ದರು. ಕಳ್ಳತನದಲ್ಲಿ ಭಾಗಿಯಾಗಿದ್ದ ದಂಪತಿ ಸೇರಿ 6 ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಶ್ರೀನಿವಾಸ್ , ಮಂಜುಳಾ , ಮುಬಾರಕ್ ಅಹ್ಮದ್ , ಗಂಗಾಧರಪ್ಪ, ಶಾರದಮ್ಮ ಮತ್ತು ಗಂಗಣ್ಣ@ ಸೊಳ್ಳೆ ಬಂಧಿತರು. ಆರೋಪಿಗಳಿಂದ 25 ಲಕ್ಷ ಮೌಲ್ಯದ 245 ಗ್ರಾಂ ತೂಕದ ಚಿನ್ನದ ಗಟ್ಟಿ, 255 ಗ್ರಾಂ ತೂಕದ ಚಿನ್ನಾಭರಣ ಸೇರಿ ಒಟ್ಟು 500 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಲಿನಲ್ಲಿ ಇರೋರಿಗೆ ಜಾಮೀನು ಪಡೆಯಲು ಲಾಯರ್ ಗೆ ಹಣ ನೀಡಬೇಕು. ಈ ಹಿನ್ನೆಲೆ ಕಳ್ಳತನ ಮಾಡಿ ಸ್ನೇಹಿತನನ್ನ ಬಿಡಿಸಿಕೊಳ್ಳಲು ಮನೆಗೆ ಕನ್ನ ಹಾಕಿದ್ದ
ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ , ಬಸವೇಶ್ವರ ನಗರ ರಾಜಗೋಪಾಲನಗರ , ಯಲಹಂಕ , ಕಾಮಾಕ್ಷಿಪಾಳ್ಯ ಸೇರಿ ಹಲವೆಡೆ 20 ಕಳ್ಳತನ ಪ್ರಕರಣಗಳು ದಾಖಲಾಗಿವೆ
ಲ್ಯಾಪ್‌ಟಾಪ್ ಕಳ್ಳರ ಬಂ
ಲ್ಯಾಪ್‌ಟಾಪ್‌ಗಳನ್ನ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.ಪಾದರಾಯನಪುರದ ನಿವಾಸಿ ಅಸ್ಲಮ್ ಪಾಷ (35) ಮತ್ತು ಜೆಪಿ ನಗರದ ಯಾಸೀನ್ ಷರೀಫ್(33) ಬಂಧಿ
ಇದನ್ನೂ ಓದಿ: PSI Recruitment Scam: ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾಧ ಅಲ್ವಾ? ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ
ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಮಾರಾಟ ಮಾಡುವವರನ್ನ ಇಬ್ರು ಟಾರ್ಗೆಟ್ ಮಾಡುತ್ತಿದ್ದರು. ಗ್ರಾಹಕರಂತೆ ಪೋಸ್ ನೀಡಿ ಅವರನ್ನು ಸಂಪರ್ಕಿಸಿ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ
ರಾತ್ರಿ ಗೋಡಾನ್ ಗೆ
ಜೂನ್14ರಂದು ಲ್ಯಾಪ್‌ಟಾಪ್ ಖರೀದಿಸುವ ನೆಪದಲ್ಲಿ ಅರೋಪಿ ಅಸ್ಲಮ್ ಪಾಷಾ ಹೋಗಿದ್ದನು. ಜೂನ್ 17 ರಂದು ರಾತ್ರಿ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿದ್ದ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಗೋಡಾನ್ ಗೆ ಸ್ನೇಹಿತ ಯಾಸೀನ್ ಶರೀಫ್‌ನೊಂದಿಗೆ ಬಂದು ಕೃತ್ಯ ಎಸಗಿದ್ದ
ರಾಡ್‌ನಿಂದ ಗೋಡನ್ ಬೀಗ ಮುರಿದು ಜುಲ್ಫಿಕಾರ್ ಎನ್ನುವವರಿಗೆ ಸೇರಿದ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ
ಕೊರೊನಾ ಸಂಕಷ್ಟದಲ್ಲಿ ಇಬ್ಬರು ಸಾಲ ಮಾಡಿಕೊಂಡಿದ್ದರು. ಈ ಹಿನ್ನೆಲೆ ಕಳ್ಳತನಕ್ಕೆ ಮುಂದಾಗಿದ್ರು ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ ಸುಮಾರು ಆರು ಲಕ್ಷ ಬೆಲೆಬಾಳುವ ಲ್ಯಾಪ್‌ಟಾಪ್, ಒಂದು ಕಾರ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿ
13 ಲಕ್ಷ ಗಾಂಜಾ ವಶಕ್ಕೆ, ಮೂವರ ಬಂ
ನೆಲಮಂಗಲ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 13 ಲಕ್ಷ ಮೌಲ್ಯದ 35 ಕೆ.ಜಿ 600 ಗ್ರಾಂನಷ್ಟು ಗಾಂಜಾ ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ. ಹೆಸರಘಟ್ಟದ ನಾಗರಾಜು (23), ಬೆಂಗಳೂರು ಟಿ.ಸಿ ಪಾಳ್ಯದ ಸೈಯದ್ ಇಮ್ರಾನ್ 38 ಮತ್ತು ಆಂಧ್ರದ ಕಡಪ ಮೂಲದ ದಿನೇಶ್ 25 ಬಂಧಿ
ಇದನ್ನೂ ಓದಿ; J Manjunath: ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ ಮಂಜುನಾ
ನೆಲಮಂಗಲ ತಾಲ್ಲೂಕು ಇಸ್ಲಾಂಪುರದ ಸಾಯಿರಾಂ ಲೇಔಟ್ ಮತ್ತು ರಾಶಿ ಲೇಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. ಗಾಂಜಾ ಮಾಲು ಸಹಿತ ಕೃತ್ಯಕ್ಕೆ ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳು ಮತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿ
ಮಾದನಾಯಕನಹಳ್ಳಿಯಲ್ಲಿ 10 ಜನರ
ಮಾದನಾಯಕನಹಳ್ಳಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ಜನ ಗಾಂಜಾ ಮಾರಾಟಗಾರರನ್ನು ಬಂಧನ ಮಾಡಿದ್ದಾರೆ. ಸೈಯದ್ ನೂರ್, ಅಬ್ಬಲ್ ಖಾನ್, ಇರ್ಪಾನ್ ಖಾನ್ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. 10 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ ಬಂಧನದೆ.ಥ್ತರು.ಧನದೆ.ರು.ನು.ಕನ್ನರು.ತರು.ಧನ.ರು.ತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ

Post a Comment