Bengaluru: ಬೈಕ್ ಮೇಲಿತ್ತು 29 ಸಾವಿರ ಫೈನ್; ದಂಡ ತಪ್ಪಿಸಲು ಮಾಡಿದ ಖತರ್ನಾಕ್ ಪ್ಲಾನ್


 ದಾಖಲೆಗಳ ಪ್ರಕಾರ ಮರಿಗೌಡ ಬೈಕ್ ನಂಬರ್ KA 05 JS 7536 ಆದರೆ ದಂಡಪಾವತಿಯನ್ನು ತಪ್ಪಿಸುವ ಉದ್ಧೇಶದಿಂದ ನಂಬರ್ ಪ್ಲೇಟ್ ನಂಬರ್ ಬದಲಾವಣೆ ಮಾಡಿದ್ದಾನೆ.

 ಬೆಂಗಳೂರು (ಜು.30): ವಾಹನ ಸವಾರರು ಟ್ರಾಫಿಕ್ (Traffic) ರೂಲ್ಸ್ ಬ್ರೇಕ್ ಮಾಡೋದು ಹೊಸದೇನಲ್ಲ. ಅನೇಕ ವಾಹನ ಸವಾರರ (Motorists) ಮೇಲೆ ಪೊಲೀಸರ ದಂಡದ (Police Fine) ಲಿಸ್ಟೇ ಇರುತ್ತೆ. ಆದ್ರೆ ಬೆಂಗಳೂರಿನ ಮರಿಗೌಡ ಎಂಬಾತನ ಬೈಕ್ ಮೇಲೆ ಬರೋಬ್ಬರಿ  29 ಸಾವಿರ ದಂಡ ಬಿದ್ದಿದೆ. ಪೊಲೀಸರು ವಿಧಿಸಿರೋ ದಂಡದದಿಂದ ಎಸ್ಕೇಪ್ (Escape) ಆಗಲು ಈತ ಮಾತ್ರ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಒಂದು ಬೈಕ್ಗೆ ಎರಡು ನಂಬರ್ ಪ್ಲೇಟ್ ಹಾಕಿದ್ದಾನೆ. ಮುಂದಿನ ಪ್ಲೇಟ್ ನಲ್ಲಿ ಒಂದು ನಂಬರ್, ಹಿಂದೆ ಮತ್ತೊಂದು ನಂಬರ್ ಇದೆ. ದಂಡ ತಪ್ಪಿಸಲು ಹೋಗಿ ಎರಡೆರಡು ನಂಬರ್ ಪ್ಲೇಟ್ (Number Plate) ಹಾಕಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ


ನಂಬರ್ ಪ್ಲೇಟ್ ದಾಖಲೆಗಳ ಪ್ರಕಾರ ಮರಿಗೌಡ ಬೈಕ್ ನಂಬರ್ KA 05 JS 7536 ಆದರೆ ದಂಡಪಾವತಿಯನ್ನು ತಪ್ಪಿಸುವ ಉದ್ಧೇಶದಿಂದ ನಂಬರ್ ಪ್ಲೇಟ್ ನಂಬರ್ ಬದಲಾವಣೆ ಮಾಡಿದ್ದಾನೆ. KA 05 JS 7538 ಎಂದು ಬದಲಾವಣೆ ಮಾಡಿದ್ದಾನೆ.

ಆರೋಪಿ ಮರಿಗೌ

ಬೈಕ್ ಮೇಲಿತ್ತು 30 ಸಾವಿರ 


ಮುಂದಿನ ನಂಬರ್ ಪ್ಲೇಟ್ ನಲ್ಲಿರೋ ಸಂಖ್ಯೆಯ ಬೈಕ್ ಮೇಲೆ 19,500 ದಂಡ ದಾಖಲಾಗಿತ್ತು. ಹಿಂದಿನ ನಂಬರ್ ಪ್ಲೇಟ್‌ ಮೇಲೆ 9,500 ದಂಡ ಬಿದ್ದಿದೆ. ಸಾವಿರಾರು ರೂಪಾಯಿ ದಂಡ ಪಾವತಿ ಮಾಡಲು ಆಗದೆ ಮರಿಗೌಡ ಈ ರೀತಿ ಮಾಡಿದ್ದಾನೆ.ದಂಡಡದ್ದಾನೆ. ಯಾದಂಡ ತಪ್ಪಿಸಿಕೊಳ್ಳಲು ಹೋಗಿ ಜೈಲುಪಾಲಾದ

ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ತಿಂಗಳ 29 ನೇ ತಾರೀಖಿನಂದು ಆರೋಪಿ ಸಿಕ್ಕಿಬಿದ್ದಿದ್ದಾನೆ. ರಾಜಾಜಿನಗರ ಬಳಿಯ ಕೂಲಿನಗರ ಸೇತುವೆ ಬಳಿ ಆರೋಪಿ ಮರಿಗೌಡ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿ ಆಗಸ್ಟ್ 12 ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: Araga Jnanendra: ಗೃಹ ಸಚಿವರ ನಿವಾಸಕ್ಕೆ ABVP ಮುತ್ತಿಗೆ; ಇಂಟಲಿಜೆನ್ಸ್ ವೈಫಲ್ಯ ಒಪ್ಪಿಕೊಂಡ ನಗರ ಪೊಲೀಸ್ ಆಯುಕ್ತ

ಟ್ರಾಫಿಕ್ ಕಡಿಮೆ ಮಾಡು ಗೂಗಲ್ ಜೊತೆ ಒಪ್ಪಂದ

ಗೂಗಲ್ (Google) ಈಗಾಗಲೇ ಎಲ್ಲ ಕಡೆ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ. ಅದರ ಪ್ರಭಾವ ಈ ಸಲ ನಮ್ಮ ಬೆಂಗಳೂರಿನ ಟ್ರಾಫಿಕ್‌ (Bengaluru Traffic) ಮೇಲೆ ಆಗಿರುವುದು ವಿಶೇಷ. ಬೆಂಗಳೂರಿನಲ್ಲಿ‌ ಟ್ರಾಫಿಕ್‌ ಸಮಸ್ಯೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ಟ್ರಾಫಿಕ್‌ ಸಮಸ್ಯೆಗೆ ಗುಡ್‌ ಬೈ ಹೇಳಲು ಟ್ರಾಫಿಕ್ ಲೈಟ್ ಸಮಯವನ್ನು ಅತ್ಯುತ್ತಮವಾಗಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ (Bengaluru Traffic Police) ಗೂಗಲ್ ತನ್ನ ಪಾಲುದಾರಿಕೆಯನ್ನು ಬುಧವಾರ ಪ್ರಕಟಿಸಿದೆ . "ಇದು ಸ್ಥಳೀಯ ಸಂಚಾರಿ ಪ್ರಾಧಿಕಾರವು ಪ್ರಮುಖ ಸರ್ಕಲ್‌ಗಳಲ್ಲಿ (Circle) ಇರುವ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ಇದನ್ನು ನಗರದಾದ್ಯಂತ ವಿಸ್ತರಿಸಲಾಗುತ್ತದೆ.

ಇದನ್ನೂ ಓದಿ: First Flight Journey: ಹಾರುತಾ ಹಾರುತಾ, ಆಕಾಶದಲ್ಲಿ ತೇಲುತಾ! ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ 27 ಅಜ್ಜಿಯರು!

ಈ ಬಗ್ಗೆ ಗೂಗಲ್ ಅಧಿಕಾರಿಗಳು ಏನು ಹೇಳಿದ್ರು

“ಸ್ಥಳೀಯ ಸಂಚಾರ ಪ್ರಾಧಿಕಾರಗಳ ಪ್ರಯತ್ನದ ಬೆಂಬಲದೊಂದಿಗೆ ನಾವು ನಮ್ಮ‌ ಗೂಗಲ್‌ ಕಡೆಯಿಂದ ಬೆಂಗಳೂರಿನಲ್ಲಿ ಸುರಕ್ಷಿತ ಚಾಲನೆಗಾಗಿ ಗೂಗಲ್‌ ಮ್ಯಾಪ್‌ ನ ವೇಗವನ್ನು ಹೆಚ್ಚಿಸಲು ಈ ಸಂಚಾರ ಪ್ರಾಧಿಕಾರಗಳಿಗೆ ಸಹಯೋಗ ನೀಡಲಿದ್ದೇವೆ” ಎಂದು ಗೂಗಲ್ ಅಧಿಕಾರಿಗಳು ಹೇಳಿದ್ದಾರೆ.

ಜೆನೆಸಿಸ್ ಇಂಟರ್‌ನ್ಯಾಶನಲ್ ಮತ್ತು ಟೆಕ್ ಮಹೀಂದ್ರಾ ಸಹಭಾಗಿತ್ವದಲ್ಲಿ ಭಾರತದಲ್ಲಿ ತನ್ನ ಗಲ್ಲಿ/ಹಾದಿಬೀದಿಗಳ ವೀಕ್ಷಣೆ ಅನುಭವವನ್ನು ಪ್ರಾರಂಭಿಸುವುದಾಗಿ ಗೂಗಲ್ ಘೋಷಿಸಿದೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಭಾರತದ 10 ನಗರಗಳಾದ್ಯಂತ 150,000 ಕಿ.ಮೀ ಗಿಂತಲೂ ಹೆಚ್ಚು ವ್ಯಾಪ್ತಿಯ ಸ್ಥಳೀಯ ಪಾಲುದಾರರಿಂದ ಪರವಾನಗಿ ಪಡೆದ ಹೊಸ ಚಿತ್ರಗಳೊಂದಿಗೆ ಗೂಗಲ್‌ ಮ್ಯಾಪ್‌ನಲ್ಲಿ ಈಗಾಗಲೇ ಗಲ್ಲಿ ವೀಕ್ಷಣೆ ಲಭ್ಯವಿದೆ.ಮಾರಿಸುತ್ತಿದ್ದ .ದ್ದ

Post a Comment

Previous Post Next Post