ಬೆಂಗಳೂರು (ಜೂ 27): ರೋಹಿತ್ ಚಕ್ರತೀರ್ಥ (Rohith Chakrathirtha) ಸಮಿತಿಯ ಪಠ್ಯ ಪರಿಷ್ಕರಣೆ ವಿವಾದದಿಂದ (Controversial) ಭುಗಿಲೆದ್ದಿದ್ದ ಭಾರೀ ಜನಾಕ್ರೋಶಕ್ಕೆ ಸರ್ಕಾರ ಕೊನೆಗೂ ಮಣಿದಿದೆ. ಪಠ್ಯ ವಿವಾದಕ್ಕೆ ಸರ್ಕಾರ ತೆರೆ ಎಳೆದಿದ್ದು ಚರ್ಕತೀರ್ಥ ಸಮಿತಿ ಮಾಡಿದ ಕೆಲವೊಂದಷ್ಟು ಎಡವಟ್ಟುಗಳನ್ನು ತಿದ್ದುಪಡಿ ಮಾಡಲು ಆದೇಶ (Order) ಹೊರಡಿಸಿದೆ. ವಿವಾದಿತ 8 ಅಂಶಗಳು ತಿದ್ದುಪಡಿಯಾಗಲಿದ್ದು, ಮಕ್ಕಳ ವಯೋಮಾನ ಮೀರಿದ ಪಠ್ಯ ಭೋದನೆಯನ್ನು ಕೈಬಿಡಲು ಸುತ್ತೋಲೆ ಹೊರಡಿಸಿದೆ.
ಭಾರೀ ಚರ್ಚೆಗೀಡಾಗಿದೆ ಪಠ್ಯ ಪುಸ್ತಕ ಪರಿಸ್ಕ
ಕಳೆದ 2 ತಿಂಗಳಿನಿಂದ ಪ್ರತಿನಿತ್ಯ ಪಠ್ಯ ಪರಿಷ್ಕರಣೆಯದ್ದೇ ಚರ್ಚೆಯಾಗಿದೆ. ಜನಾಕ್ರೋಶ, ಹೋರಾಟಗಾರರ ಪ್ರತಿಭಟನೆ, ಸಾಹಿತಿಗಳ ಪಠ್ಯ ಹಿಂಪಡೆಯುವ ಅಭಿಯಾನ, ಚಿಂತಕರು ಬುದ್ದಿಜೀವಿಗಳ ಟೀಕೆ ಟಿಪ್ಪಣಿ. ರೋಹಿತ್ ಚಕ್ರತೀರ್ಥ vs ಬರಗೂರು ರಾಮಚಂದ್ರಪ್ಪ, ರಾಜಕೀಯ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪ ಒಂದಾ ಎರಡಾ ಹೇಳುತ್ತಾ ಹೋದ್ರೆ ಅದೊಂದು ಪುಸ್ತಕವೇ ಆಗುತ್ತೆ ಬಿಡಿ
ವಿವಾದಕ್ಕೆ ತೆರೆ ಎಳೆದ ಸರ್ಕಾ
ಈ ಎಲ್ಲಾ ವಾದ-ವಿವಾದಗಳಿಗೆ ಸರ್ಕಾರ ಕೊನೆಗೂ ತೆರೆ ಎಳೆದು ಅಂತ್ಯ ಹಾಡಿದೆ. ಭಾರೀ ಜನಾಕ್ರೋಶಕ್ಕೆ ಮಣಿದು 1 ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯ ಹಾಗೂ 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ವಿಷಯಗಳ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಹುದಾದ 8 ಅಂಶಗಳ ತಿದ್ದುಪಡಿಗೆ ಆದೇಶ ಹೊರಡಿಸಿದೆ ಇಷ್ಟೇ ಅಲ್ಲದೆ ಆಯಾ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯ ಬೋಧನೆಯನ್ನು ಶೈಕ್ಷಣಿಕ ಸಾಲಿನಿಂದ ಕೈಬಿಡುವಂತೆ ಸುತ್ತೋಲೆ ಹೊರಡಿ
ಶಿಕ್ಷಣ ಇಲಾಖೆಯಿಂದ ಪರಿಷ್ಕರಣೆಯಾಗುತ್ತಿರುವ 8 ಅಂಶ
1. 9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರಲ್ಲಿ ತೆಗೆದಿದ್ದ ಡಾ.ಅಂಬೇಡ್ಕರ್ ಅವರ ಸಂವಿಧಾನದ ಶಿಲ್ಪಿ ಎಂಬ ಪದ ಪುನರ್ ಸೇರ್ಪ
2. 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರ ಸಂಪೂರ್ಣ ಪಾಠ ಮರು ಸೇರ್ಪ
3. 7ನೇ ತರಗತಿ ಗೊಂಬೆ ಕಲಿಸುವ ನೀತಿ ಪಾಠದಲ್ಲಿ ಡಾ. ಆರ್.ಎನ್ ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದ, ಮೂಲ ಕೃತಿಕಾರರಾದ ಚಿ. ಉದಯಶಂಕರ್ ರವರ ಕವಿ ಪರಿಚಯ ಸೇರ್ಪ
4. 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಸೇವೆಯ ಕುರಿತಾದ ಸಾಲುಗಳ ಪುನರ್ ಸೇರ್ಪ
5. 7ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಸುರಪುರ ನಾಯಕರ ಕುರಿತಾದ ವಿವರಗಳ ಸೇ
6. 9ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಬಸವಣ್ಣನವರ ಲಿಂಗಾಯತ ಧರ್ಮ ಸೇರ್ಪಡೆ ವಿಷಯಾಂಶ ಕುರಿತು ಪುನರ್ ಪರಿಶೀಲ
7. 7ನೇ ತರಗತಿ ಕನ್ನಡ, ಸಮಾಜ ವಿಜ್ಞಾನ ಭಾಗ-1ರ ರಾಷ್ಟ್ರಕವಿ ಕುವೆಂಪು ಹಾಗೂ ಹುಯಿಲಗೋಳ ನಾರಾಯಣರಾವ್ ರವರ ಭಾವಚಿತ್ರಗಳನ್ನು ಅಳವಡಿಸುವು
8. 4ನೇ ತರಗತಿಯ ಪರಿಸರ ಅಧ್ಯಯನ ಪಾಠದ ಕುವೆಂಪು ಆನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಸಾಲನ್ನು ಕೈಬಿಡು
ದೇವೇಗೌಡರು ಪತ್ರದಲ್ಲಿ ಪ್ರಸ್ತಾಪಿಸಿದ ಎಲ್ಲಾ ವಿಷಯಗಳ ಬಗ್ಗೆ ಕ್ರ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ವಿಷಯಗಳು ಮಾರ್ಪಾಡಾಗಿವೆ, ಕೆಲವು ಕಡೆ ಹಳೆಯದನ್ನೇ ಉಳಿಸಿಕೊಳ್ಳಲಾಗಿದೆ. ಮಾಜಿ ಪ್ರಧಾನಮಂತ್ರಿ ದೇವೆಗೌಡರು ನನಗೆ ಪಠ್ಯ ಪರಿಷ್ಕರಣೆ ವಿವಾದಗಳ ಬಗ್ಗೆ ಪತ್ರ ಬರೆದು ಮನವಿ ಮಾಡಿದ್ರು. ದೇವೆಗೌಡರು ಪತ್ರದಲ್ಲಿ ಏನು ಪ್ರಸ್ಥಾಪ ಮಾಡಿದ್ರೋ ಅವೆಲ್ಲದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ, ಪತ್ರದ ಮುಖೇನ ಅವರಿಗೆ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ರು
ಸದ್ಯ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ತೆರೆ ಎಳೆದು ಬೀಸೋ ದೊಣ್ಣೆಯಿಂದ ಪಾರಾಗಿ
ಆದ್ರೆ ಇದು ಮತ್ತೊಂದು ಹೊಸ ಅಧ್ಯಾಯದ ಆರಂಭ ಅಷ್ಟೇ ಎನ್ನುತ್ತಿದ್ದಾರೆ ತಜ್ಞರು, ಈಗಾಗ್ಲೆ ಶೇ. 60% ಪರಿಷ್ಕೃತ ಪುಸ್ತಕಗಳು ಮಕ್ಕಳ ಕೈಸೇರಿವೆ. ಅದನ್ನ ವಾಪಸ್ ಪಡೆದು ತಿದ್ದುಪಡಿ ಪಠ್ಯ ಪ್ರಿಂಟ್ ಮಾಡಿ ಮಕ್ಕಳಿಗೆ ಕೊಡೋದ್ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ. ದೆ..ಮ!ವುದುದುನೆ.ರ್ಪಡೆಡೆಡೆಡೆಡೆಗಳುಸಿದೆ.ರ.ರಣೆಮಕ್ಕಳಿಗೆ ಕೊಡೋದ್ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ.
Post a Comment