ಬೆಂಗಳೂರು (ಜೂ 24): ಗಾರ್ಡನ್ ಸಿಟಿ (Garden City) ಎಂದರೇ ಪ್ರಖ್ಯಾತಿಯಾಗಿರುವ ರಾಜಧಾನಿ ಬೆಂಗಳೂರಿನ (Bengaluru) ಹಿರಿಮೆಗೆ ಧಕ್ಕೆ ತರುವುದು ಟ್ರಾಫಿಕ್ (Traffic) ಹಾಗೂ ಇಲ್ಲಿನ ಕಸದ ಸಮಸ್ಯೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿರುವ ಬೆಂಗಳೂರಿನ ರಸ್ತೆ ಬದಿಗಳಲ್ಲಿ ಕಸದ ರಾಶಿ (Garbage Heap) ಸರ್ವೇ ಸಾಮಾನ್ಯ. ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಸಹ ಜನರು ಮಾತ್ರ ಮತ್ತೆ ತಮ್ಮ ಚಾಳಿ ಮುಂದುವರೆಸುತ್ತಲೇ ಇದ್ದಾರೆ. ಕಸ ವಿಲೇವಾರಿಗೆಂದೇ ಬಿಬಿಎಂಪಿ (BBMP) ಕೂಡ ಪ್ರತಿ ಬಜೆಟ್ ನಲ್ಲಿ 1,200 ಕೋಟಿಗೂ ಅಧಿಕ ರೂಪಾಯಿ ಮೀಸಲಿಟ್ಟು ಕೆಲಸ ಮಾಡುತ್ತೆ. ಆದರೆ ಜನರು ಕಂಡಕಂಡಲ್ಲಿ ಕಸ ಎಸೆದು ನಗರವನ್ನು ಮಲಿನಮಾಡುವುದನ್ನು ಮಾತ್ರ ಬಿಟ್ಟಿಲ್ಲ
ಕಸ ಎಸೆಯುವ ಜನರೇ ಎಚ್ಚರ, ಬಿಬಿಎಂಪಿಯಿಂದ ಜಾರಿಯಾಗಿದೆ ಹೊಸ ಪಾಲಿಸಿ
ಕಸ ವಿಲೇವಾರಿಗೆ ಬಿಬಿಎಂಪಿಯೇ ಮನೆ ಮನೆಗೆ ಸಿಬ್ಬಂದಿಗಳನ್ನು ಕಳುಗಿಸಿ ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡಿ ಪಡೆದುಕೊಂಡು ವಿಲೇವಾರಿ ಮಾಡುತ್ತೆ. ಅದಾಗಿಯೂ ಜನರು ತಮ್ಮ ಏರಿಯಾದ ಒಂದು ಜಾಗದಲ್ಲಿ ರಾತ್ರೋ ರಾತ್ರಿ ಕಸತಂದು ಸುರಿಯುತ್ತಾರೆ. ಇದಕ್ಕೂ ಕಡಿವಾಣ ಹಾಕಲು ಮಾರ್ಷಲ್ ಗಳ ನಿಯೋಜನೆ ಮಾಡಿದರೂ, ಅದು ಕೂಡ ಅಷ್ಟರ ಮಟ್ಟಿಗೆ ಯಶಸ್ವಿಯಾಗಲಿಲ್ಲ. ಜನರು ಮಾರ್ಷಲ್ ಗಳ ಜತೆಗೆ ವಾಗ್ವಾದಕ್ಕಿಳಿದು ಗಲಾಟೆ ಮಾಡಿಕೊಂಡ ಉದಾಹರಣೆಯೂ ಇದೆ. ಆದರೀಗ ರಸ್ತೆ ಬದಿಯಲ್ಲಿ ಕಸ ತಂದು ಸುರಿದು ಮಾಲಿನ್ಯ ಉಂಟು ಮಾಡುವವರ ವಿರುದ್ಧ ನೂತನ ಪ್ಲಾನ್ ನೊಂದಿಗೆ ಬಿಬಿಎಂಪಿ ಮುಂದೆ ಬಂದಿದೆ.
ಇದನ್ನೂ ಓದಿ: Pregnant: ಒಂದೇ ಆಸ್ಪತ್ರೆಯ 14 ನರ್ಸ್‌ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! ವೈರಲ್ ಆಯ್ತು ಬೇಬಿ ಬಂಪ್ ಫೋಟೋ
ಕಸ ಎಸೆಯುವವರನ್ನು ತೋರಿಸಿ ಬಿಬಿಎಂಪಿಯಿಂದ ತಗೊಳ್ಳಿ ಸರ್ಟಿಫಿಕೇ
ಬೇಕಾ ಬಿಟ್ಟಿ ಕಸ ಎಸೆಯುವವರನ್ನು ತೋರಿಸಿಕೊಟ್ಟರೆ ಪಾಲಿಕೆಯಿಂದ ಇನ್ಮುಂದೆ ಸರ್ಟಿಫಿಕೇಟ್ ಸಿಗಲಿದೆ. ಕಂಡ ಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ನಗರದ ರಸ್ತೆ ಗಬ್ಬು ನಾರುತ್ತಿದೆ. ಈಗಾಗಲೇ ದಂಡ ಪ್ರಯೋಗ, ಮಾರ್ಷಲ್ ಗಳಿಂದ ಎಚ್ಚರಿಕೆ ನೀಡಿದರೂ ರಾಜಧಾನಿ ಮಂದಿ ಬಗ್ಗುತ್ತಿಲ್ಲ. ಹೀಗಾಗಿ ಪಾಲಿಕೆಯಿಂದ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಕಸ ಎಸೆಯೋ ಕಳ್ಳರನ್ನ ಹಿಡಿದು ಕೊಡಿ ಸರ್ಟಿಫಿಕೇಟ್ ತಗೊಳ್ಳಿ ಎಂದು ಮುಂದೆ ಬಂದಿದೆ. ನಗರದ 1,500ಕ್ಕೂ ಅಧಿಕ ರಸ್ತೆ ಬದಿಗಳು ಈಗಾಗಲೇ GVP (Garbage Vulnerable Points) ಎಂದು ಬಿಬಿಎಂಪಿ ಗುರುತಿಸಿ
ಇದನ್ನೂ ಓದಿ: New Rules: ಜನಸಾಮಾನ್ಯರೇ ಗಮನಿಸಿ, ಜುಲೈ 1ರಿಂದ ಈ ಎಲ್ಲಾ ರೂಲ್ಸ್ ಚೇಂಜ್ ಆಗುತ್ತೆ
ಗಾರ್ಬೇಜ್ ಬ್ಲಾಕ್ ಸ್ಪಾಟ್
ಈ ಪೈಕಿ 118 ಜಾಗಗಳು ಗಾರ್ಬೇಜ್ ಬ್ಲಾಕ್ ಸ್ಪಾಟ್ ಗಳು ಎಂದು ಗುರುತು ಮಾಡಲಾಗಿದೆ. ಈ 118 ಬ್ಲಾಕ್ ಸ್ಪಾಟ್ ಗಳಲ್ಲಿ 48 ಜಾಗಗಳು ವಾರಕ್ಕೆ ಎರಡು ಬಾರಿ ಬ್ಲಾಕ್ ಸ್ಪಾಟ್‌ಗಳಾಗುತ್ತಿವೆ. ಉಳಿದಂತೆ 70 ಕಡೆ ಕಸ, ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿರುವ ಸ್ಪಾಟ್ ಎಂದು ಗುರುತಿಸಲಾಗಿದೆ. ಉಳಿದಂತೆ 1,400ಕ್ಕೂ ಅಧಿಕ ಜಾಗಗಳಲ್ಲಿ ಮನೆ, ಇತರೆ ತ್ಯಾಜ್ಯ ತಂದು ಎಸೆದು ಜನರು ಮಾಲಿನ್ಯ ಮಾಡುತ್ತಿದ್ದಾರೆ. ಜನರ ಉಡಾಫೆ ವರ್ತನೆಗೆ ಬ್ರೇಕ್ ಹಾಕಲು ನಯಾ ಪ್ಲ್ಯಾನ್ ಪಾಲಿಕೆ ಮಾಡಿಕೊಂಡಿ
ಬ್ಲಾಕ್ ಸ್ಪಾಟ್ ಗಳ ಸುತ್ತಮುತ್ತಲಿರುವ ಮನೆಗಳಲ್ಲಿ ಸಿಸಿಟಿವಿ ಇದ್ದರೆ ಬಿಬಿಎಂಪಿಗೆ ಕೊಟ್ಟರೆ ಪಾಲಿಕೆ ಸರ್ಟಿಫಿಕೇಟ್ ಕೊಡಲಿದೆ. ಸ್ವಚ್ಛ ಬೆಂಗಳೂರಿಗೆ ಸಹಕಾರ ಕೊಟ್ಟ ಸರ್ಟಿಫಿಕೇಟ್ ಜನರಿಗೆ ಸಿಗಲಿದೆ. ರಾತ್ರೋರಾತ್ರಿ ಕಸ ತಂದು ಬೇಕಾಬಿಟ್ಟಿ ಸುರಿದು ಹೋಗುವ ಜನರ ದೃಶ್ಯ ಇರುವ ಸಿಸಿಟಿಟಿವಿ ಸಮೇತ ಕೊಡುವಂತೆ ಪಾಲಿಕೆ ಮನವಿ ಮಾಡಿಕೊಂಡಿದೆ. ಕಸ ಎಸೆಯೋ ಕಳ್ಳರ ಹಿಡಿದುಕೊಟ್ಟರೆ ಪರಿಸರ ಪ್ರಹರಿ ಎಂದು ಪಾಲಿಕೆ ಇನ್ಮುಂದೆ ಸರ್ಟಿಫಿಕೇಟ್ ಕೊಡಲಿ
ಈ ಬಗ್ಗೆ ಪ್ರಿಕ್ರಿಯಿಸಿದ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಎಷ್ಟೇ ಕ್ಲೀನ್ ಮಾಡಿದರೂ ಮತ್ತೆ ಮತ್ತೆ ಬಡಾವಣೆಗಳ ರಸ್ತೆಗಳಲ್ಲಿ ಕಸ ತಂದು ಜನರು ಸುರಿಯುತ್ತಿದ್ದಾರೆ. ಜನರ ತಪ್ಪನ್ನು ಜನರಿಂದಲೇ ಸರಿ ಮಾಡಿಸಲು ಈ ಮೂಲಕ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ ಎಂದರು. ದೆ.ದೆ.ಗಳು!ದೆ.ಟ್ !ಸ್ ! ಪಾಲಿಕೆ ಮುಂದಾಗಿದೆ ಎಂದರು.
Post a Comment