ಬೆಳಗಾವಿ (ಜೂ. 2): ಸುವರ್ಣಸೌಧ (Suvarna Soudha) ಉತ್ತರ ಕರ್ನಾಟಕ (Uttara Karnataka) ಜನರ ಪಾಲಿನ ಶಕ್ತಿ ಕೇಂದ್ರ ಆಗಬೇಕಿತ್ತು. ಆದರೆ ಸರ್ಕಾರಗಳ ನಿರ್ಲಕ್ಷ್ಯದಿಂದ ಬಿಳಿ ಆನೆಯಾಗಿದೆ. ಸೌಧದ ಮೆಟ್ಟಿಲ ಮೇಲೆ ಶಾವಿಗೆ, ಸಂಡಿಗೆ ಒಣಗಿಸಿದ್ದಾರೆ. ಈ ಚಿತ್ರಗಳು ನಿನ್ನೆ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ (Social Media) ಸಂಚಲನ ಸೃಷ್ಟಿಸಿವೆ. ಸರ್ಕಾರದ (Government) ನಿರ್ಲಕ್ಷ್ಯ ಧೋರಣೆ ಪ್ರತಿಬಿಂಬ ಇದು ಎಂಬ ಆಕ್ರೋಶ ವ್ಯಕ್ತವಾಗಿದೆ. ಸೌಧ ನಿರ್ಮಾಣಕ್ಕೆ ಹೋರಾಟ ಮಾಡಿದ್ದ ಜನ, ಕ್ರಿಯಾಶೀಲ ಮಾಡಿ ಅಂತಲೂ ಹೋರಾಟ ಮಾಡಿದ್ದರು.
ಆದರೇ ಸರ್ಕಾರದ ಕೇವಲ ಭರವಸೆಯಲ್ಲಿ ಕಾಲ ಕಳೆದಿದೆ. ಶಾವಿಗೆ, ಸಂಡಿಗೆ ಒಣಗಿಸಿದ್ದು, ಉತ್ತರ ಕರ್ನಾಟಕ ಬಗ್ಗೆ ಸರ್ಕಾರಕ್ಕೆ ಇರೋ ಧೋರಣೆ ತೋರಿಸುವಂತೆ ಇದೆ. ಪ್ರಕರಣ ಬಳಿಕ ಅಧಿಕಾರಿಗಳು ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಸಂಬಂಧ ಪಟ್ಟ ಗುತ್ತಿಗೇದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಸಹ ನೀಡಲಾಗಿದೆ. ಅಮಾಯಕ ಕಾರ್ಮಿಕ ಮಹಿಳೆ ಮೇಲೆ ಕ್ರಮ ಕೈಗೊಂಡ ಸರ್ಕಾರ, 500 ಕೋಟಿ ವ್ಯರ್ಥ ಮಾಡಿದರ ಮೇಲೆ ಏನ್ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಉತ್ತರಿಸಬೇಕಿದೆ.

Post a Comment