ಬೆಂಗಳೂರು : 9 ಜೂನ್, ಕಾಡುಗೋಡಿ ಪೊಲೀಸ್‌ರ ಕಾರ್ಯಚರಣೆ, ಕುಖ್ಯಾತ ಅಂತರ್ ರಾಜ್ಯ ದ್ವಿಚ್ರಕ ವಾಹನ ಕಳ್ಳರ ಬಂಧನ.


ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಡರ್ ರವರಾದ ಶ್ರೀ.ಮಂಜುನಾಥ ರವರ ನೇತೃತ್ವದಲ್ಲಿ ಪಿಎಸ್‍ಐ ಶ್ರೀ .ಮಹೇಶ್, ಪಿಎಸ್‍ಐ ಶ್ರೀ.ಶೇಖರ್ ಮುಧವಿ, ಪಿಎಸ್‍ಐ ಶ್ರೀ.ಕಿಶನ್, ಎಎಸ್‍ಐ ಶ್ರೀ.ಮುನಿರಾಜು, ಎಎಸ್‍ಐ ಶ್ರೀ.ನಾರಾಯಣಸ್ವಾಮಿ, ಶ್ರೀ ಈರಪ್ಪ ಶೆಟ್ಟಿ ಹೆಚ್.ಸಿ.7323, ಶ್ರೀ ವೆಂಕಟೇಶ್ ಹೆಚ್.ಸಿ.10772, ಶ್ರೀ ನರೇಂದ್ರ ಹೆಚ್.ಸಿ.9235, ಶ್ರೀ ಚಿಕ್ಕಯಲ್ಲಪ್ಪ ಹೆಚ್‍ಸಿ 10059, ಶ್ರೀ. ಆನಂದಗೌಡರ್ ಪಿಸಿ 15312 ರವರನ್ನು ಒಳಗೊಂಡ ತಂಡವು ಕಾಡುಗೋಡಿ ಮತ್ತು ಸುತ್ತಮುತ್ತಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳವು ಮಾಡುತ್ತಿದ್ದ ಆರೋಪಿಗಳಾದ ಎ:1 ಸುಬಾನ್ ಬಿನ್ ಲೇಟ್ ಸೈಯದ್ ಬಾಬು, 26 ವರ್ಷ, ವಿಕೋಟ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರಾಜ್ಯ ಎ:2 ಅರ್ಬಾಜ್ ಬಾಷ ಬಿನ್ ಅಸ್ಲಂ ಬಾಷ, 22 ವರ್ಷ, ವಿಕೋಟ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರಾಜ್ಯ ಎ:3 ಸಲೀಂ ಬಿನ್ ಮಹಮದ್ ಆಲಿ , 25 ವರ್ಷ , ವಿಕೋಟ, ಚಿತ್ತೂರು ಜಿಲ್ಲೆ ಆಂದ್ರಪ್ರದೇಶ ರಾಜ್ಯ ಎಂಬುವವರನ್ನು ದಿನಾಂಕ:-29-05-2022 ರಂದು ಠಾಣಾ ಮೊ.ಸಂ 154/2021 ಕಲಂ 379 ಐಪಿಸಿ ಪ್ರಕರಣದಲ್ಲಿ ದಸ್ತಗಿರಿ ಮಾಡಿದ್ದು, ಮತ್ತು ಎ:1 ಗಿರೀಶ್ ಆರ್ ಬಿನ್ ಲೇಟ್ ರಾಜಪ್ಪ , 24 ವರ್ಷ, ದಿನ್ನೂರು, ಕಾಡುಗೋಡಿ, ಬೆಂಗಳೂರು ಎಂಬುವವರನ್ನು ದಿನಾಂಕ:-25-05-2022 ರಂದು ಠಾಣಾ ಮೊ.ಸಂ 92/2022 ಕಲಂ 379 ಐಪಿಸಿ ಪ್ರಕರಣದಲ್ಲಿ ದಸ್ತಗಿರಿ ಮಾಡಿದ್ದು, ಆರೋಪಿಗಳಿಂದ ಕಾಡುಗೋಡಿ ಪೊಲೀಸ್ ಠಾಣೆಯ 5 ಪ್ರಕರಣಗಳು, ವೈಟ್‍ಫೀಲ್ಡ್ ಪೊಲೀಸ್ ಠಾಣೆಯ 2 ಪ್ರಕರಣಗಳು , ವಿಕೋಟ ಪೊಲೀಸ್ ಠಾಣೆಯ 5 ಪ್ರಕರಣಗಳು, ಕೋಲಾರ ಪೊಲೀಸ್ ಠಾಣೆಯ 2 ಪ್ರಕರಣಗಳು, ತಿರುಮಲ ಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿದಂತೆ ಆರೋಪಿಗಳಿಂದ ಒಟ್ಟು ಸುಮಾರು 15 ಲಕ್ಷ 20 ಸಾವಿರ ರೂಗಳ ಬೆಲೆ ಬಾಳುವ ವಿವಿಧ ಕಂಪನಿಯ ಸುಮಾರು 23 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಪ್ರಕರಣದ ತನಿಖಾ ಕಾರ್ಯ ಮುಂದುವರೆದಿರುತ್ತದೆ. ಶ್ರೀ ಶಾಂತಮಲಪ್ಪ ರವರು ಸಿಬ್ಬಂದಿಗಳ ಈ ಕಾರ್ಯಾಚರಣೆಯನ್ನು ಶ್ಲಾಘಿಸಿರುತ್ತಾರೆ.

Post a Comment

Previous Post Next Post