ಸಿ.ಎಂ. ಬೊಮ್ಮಾಯಿ ಘೋಷಣೆ - ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಇದೇ ವರ್ಷ ‘ಕೇಂದ್ರ ವೇತನ’ ಮಾದರಿ.


 ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಮಾದರಿ , ಜಾರಿಗೊಳಿಸೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು - 2022ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕ ಆರೋಗ್ಯ ಸಂಜೀವಿನ ಯೋಜನೆಗೆ ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆ ಕೊಟ್ಟಿದ್ದೇವೆ. ಆದಷ್ಟು ಬೇಗ ಆ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ನಿಮ್ಮ ಆರೋಗ್ಯ ಮುಖ್ಯ. ಸರ್ಕಾರಿ ನೌಕರರ ಆರೋಗ್ಯ ಚೆನ್ನಾಗಿದ್ದರೇ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಹೇಳಿದರು.

ನಾವು ಹತ್ತು ಹಲವಾರು ಯೋಜನೆ ಬಜೆಟ್ ಗಳನ್ನು ಮಾಡಿರುತ್ತೇವೆ. ಕಟ್ಟ ಕಡೆಯ ಬಡವರು, ದೀನ, ದಲಿತರಿಗೆ, ರೈತರು, ಮಹಿಳೆಯರಿಗೆ ಆ ಎಲ್ಲಾ ಸೌಲಭ್ಯ ಮುಟ್ಟಬೇಕಾದ್ರೆ ಸರ್ಕಾರಿ ನೌಕರರ ಸೇವೆ ಮುಖ್ಯವಾಗಿದೆ. ನಿಮ್ಮ ಶ್ರಮ ಆ ಬಡವರಿಗೆ ಮುಟ್ಟಿದ್ರೇ.. ಕೇವಲ ನಿಮಗೆ ನಿಮ್ಮ ನೌಕರಿಯಿಂದ ಒಳ್ಳೆಯ ಹೆಸರು ಬರೋದಲ್ಲ, ಪುಣ್ಯ ಪ್ರಾಪ್ತಿ ಕೂಡ ಆಗಲಿದೆ. ನಿಮ್ಮ ಸೇವೆ ಪ್ರಾಮಾಣಿಕವಾಗಿರಲಿ ಎಂದರು.

Post a Comment

Previous Post Next Post